ಕಲ್ಲಡ್ಕದಲ್ಲಿರುವ ಅನುಗ್ರಹ ಮಹಿಳಾ ಪದವಿಪೂರ್ವ ಕಾಲೇಜು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ 54 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.100 ಫಲಿತಾಂಶ ದಾಖಲಾಗಿದೆ. ಇವರಲ್ಲಿ 9 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ರಿಮಾ ಕತೀಜಾ 555 ಅಂಕ ಗಳಿಸಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಲಾ ವಿಭಾಗದಲ್ಲಿ ಶೇ.94 ಫಲಿತಾಂಶ ಲಭ್ಯವಾಗಿದ್ದು, 32 ಮಂದಿಯಲ್ಲಿ 30 ತೇರ್ಗಡೆ ಹೊಂದಿದ್ದಾರೆ. ಒಬ್ಬರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಇಡೀ ಸಂಸ್ಥೆಗೆ 10 ಡಿಸ್ಟಿಂಕ್ಷನ್, 57 ಪ್ರಥಮ ದರ್ಜೆಯ ಫಲಿತಾಂಶದೊಂದಿಗೆ ಉತ್ತಮ ಫಲಿತಾಂಶ ಲಭ್ಯವಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಿ.ಕೆ.ಇಬ್ರಾಹಿಂ ಮಾಹಿತಿ ನೀಡಿದ್ದಾರೆ.
contact:
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…