ಬಂಟ್ವಾಳ ತಾಲೂಕಿನ ಅಳಿಕೆ ಶ್ರೀ ಸತ್ಯ ಸಾಯಿ ಲೋಕಾ ಸೇವಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಾಯಿ ಸಮರ್ಥ್ 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀಧರ ಪಾನಗಂಟಿ ಮತ್ತು ಲತಾ ಪಾನಗಂಟಿ ದಂಪತಿ ಪುತ್ರ ಈತ. ಗಣಿತ, ಸಂಖ್ಯಾಶಾಸ್ತ್ರ ಮತ್ತು ಸಂಸ್ಕೃತದಲ್ಲಿ ಈತ 100 ಅಂಕ ಗಳಿಸಿದ್ದಾನೆ.
ಪಿಯುಸಿ ಬಳಿಕ ಸಿಎ ಮಾಡುವ ಕನಸನ್ನು ಹೊಂದಿದ್ದು ಇದಕ್ಕಾಗಿ ಪ್ರಥಮ ಪಿಯುಸಿಯಲ್ಲಿರುವಾಗಲೇ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಸಿಎ ಕೋಚಿಂಗ್ ಪಡೆಯುತ್ತಿದ್ದನು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…