ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು.
ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮರವರ ಜೀವನ ಮೌಲ್ಯ ಮನುಕುಲಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದು ಅವರು ಹೇಳಿದರು.ಸಮಾಜ ಎದುರಿಸುತ್ತಿದ್ದ ಅನೇಕ ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ ಹೇಮರೆಡ್ಡಿ ಮಲ್ಲಮ್ಮ ಅವರ ಬದುಕು ಬೃಹತ್ ವಚನ ಸಂಪುಟವಾಗಿದೆ ಎಂದು ಹೇಳಿದರು.
ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೆಸ್ಕಾಂ ಬಂಟ್ವಾಳ ಶಾಖೆಯ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ದಲಿತ ಮುಖಂಡ ಪದ್ಮನಾಭ ನರಿಂಗಾನ, ಉಪತಹಶೀಲ್ದಾರ್‌ಗಳಾದ ಭಾಸ್ಕರ್ ರಾವ್, ಪರಮೇಶ್ವರ ನಾಯಕ್, ಕಂದಾಯ ನಿರೀಕ್ಷಕರಾದ ದಿವಾಕರ್ ಮುಗುಳ್ಯ, ನವೀನ್ ಬೆಂಜನಪದವು, ಆಹಾರ ನಿರೀಕ್ಷ ಶ್ರೀನಿವಾಸ್, ತಾಲೂಕು ಆಡಳಿತ ಖಾತೆಯ ಸೀತಾರಾಮ ಕಮ್ಮಾಜೆ , ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿಯ ವಿಷು ಕುಮಾರ್ ಹಾಗೂ ತಾಲೂಕು ಕಛೇರಿ ಸಿಬ್ಬಂದಿ, ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಹಾಜರಿದ್ದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.