ಪಾಣೆಮಂಗಳೂರು-ಆಲಡ್ಕ ಭೂಯಾ ಸ್ಪೋಟ್ಸ್ ಕ್ಲಬ್ ವತಿಯಿಂದ ಮೂರು ದಿನಗಳ ಕಾಲ ನಡೆದ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್)-2017 ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈಝಲ್ ಆಲಡ್ಕ ಮಾಲಕತ್ವದ ನಝ್ಮ್ ಯುನೈಟೆಡ್ ತಂಡ ಚಾಂಪಿಯನ್ ಆಗಿ ಮೂಡಿ ಬಂತು. ಝಕರಿಯಾ ಮೆಲ್ಕಾರ್ ಮಾಲಕತ್ವದ ಲ್ಯಾನ್ಸರ್ ಲೀಫ್ಸ್ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಲ್ಯಾನ್ಸರ್ ಲೀಫ್ಸ್ ತಂಡದ ಅಝ್ಮಲ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರೆ, ನಝ್ಮ್ ಯುನೈಟೆಡ್ ತಂಡದ ಸಫ್ವಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅದೇ ತಂಡದ ಹಾರಿಸ್ ಬಂಗ್ಲೆಗುಡ್ಡೆ ಉತ್ತಮ ದಾಂಡುಗಾರ ಹಾಗೂ ಫಾರೂಕ್ ಉಪ್ಪುಗುಡ್ಡೆ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಚಬಕ್ ವಾರಿಯರ್ಸ್ ಬೋಗೋಡಿ ತಂಡವು ಶಿಸ್ತಿನ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಂಟ್ವಾಳ ಪುರಸಭೆಯ ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಪಂದ್ಯಾಟ ಉದ್ಘಾಟಿಸಿದರು. ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ಝಕರಿಯ್ಯಾ ಮೆಲ್ಕಾರ್, ಫಾರೂಕ್ ಆಲಡ್ಕ ಮೊದಲಾದವರು ಭಾಗವಹಿಸಿದ್ದರು. ಭೂಯಾ ಸ್ಪೋಟ್ರ್ಸ್ ಕ್ಲಬ್ ಪದಾಧಿಕಾರಿಗಳಾದ ಮುಸ್ತಫಾ ಪಿ.ಜೆ., ಹಿದಾಯತುಲ್ಲಾ, ಸಿರಾಜ್, ನೌಫಲ್ ಉಪ್ಪುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಇಸ್ಮಾಯಿಲ್ ಯು., ಪ್ರತಿಭಾನ್ವಿತ ಅಂಡರ್ ಆರ್ಮ್ ಕ್ರಿಕೆಟ್ ಪಟು ಅಝ್ಮಲ್ ಉಪ್ಪುಗುಡ್ಡೆ ಹಾಗೂ ರಿಕ್ಷಾ ಚಾಲಕ ಮುಹಮ್ಮದ್ ರಫೀಕ್ ಆಲಡ್ಕ ಅವರನ್ನು ಸನ್ಮಾನಿಸಲಾಯಿತು.
ಭೂಯಾ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಬೋಗೋಡಿ ಸ್ವಾಗತಿಸಿ, ಕಾರ್ಯದರ್ಶಿ ಶಫೀಕ್ ಉಪ್ಪುಗುಡ್ಡೆ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಹಾಗೂ ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ನಂದಾವರ ಹಾಗೂ ಮನ್ಸೂರ್ ನಂದಾವರ ತೀರ್ಪುಗಾರರಾಗಿ ಮತ್ತು ಸಲ್ಮಾನುಲ್ ಫಾರಿಶ್ ನಂದಾವರ ಸ್ಕೋರರ್ ಆಗಿ ಸಹಕರಿಸಿದರು.
ರಿಯಾಝ್ ಆಲಡ್ಕ ಮಾಲಕತ್ವದ ಪ್ಲೇ ಬಾಯ್ಸ್ ಆಲಡ್ಕ, ಫೈಝಲ್ ಆಲಡ್ಕ ಮಾಲಕತ್ವದ ನಝ್ಮ್ ಯುನೈಟೆಡ್ ಆಲಡ್ಕ, ಝಕರಿಯ್ಯಾ ಮೆಲ್ಕಾರ್ ಮಾಲಕತ್ವದ ಲ್ಯಾನ್ಸರ್ ಲೀಫ್ಸ್ ಮೆಲ್ಕಾರ್, ಖಲಂದರ್ ರಿಯಾಝ್ ಬಂಗ್ಲೆಗುಡ್ಡೆ ಮಾಲಕತ್ವದ ಎ ಟು ಝಡ್ ವಾರಿಯರ್ಸ್ ಬಂಗ್ಲೆಗುಡ್ಡೆ, ಫಾರೂಕ್ ಆಲಡ್ಕ ಮಾಲಕತ್ವದ ಬೀಯಿಂಗ್ ಭೂಯಾ ಆಲಡ್ಕ, ಸತ್ತಾರ್ ಗುಡ್ಡೆಅಂಗಡಿ ಮಾಲಕತ್ವದ ಚಬಕ್ ವಾರಿಯರ್ಸ್ ಬೋಗೋಡಿ ಈ ಆರು ತಂಡಗಳು ಕೂಟದಲ್ಲಿ ಸ್ಪರ್ಧಿಸಿದ್ದವು.