ಬಂಟ್ವಾಳ ತಾಲುಕಿನ ನೋರ್ಣಡ್ಕ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡದ ಅಪಘಾತದಲ್ಲಿ ಲಾರಿಯೊಂದು ಮಗುಚಿ ಓರ್ವ ಮೃತಪಟ್ಟಿದ್ದಾರೆ.
ಬಿಹಾರ ಮೂಲದ ಮಹೇಶ್ (35) ಸ್ಥಳದಲ್ಲೇ ಸಾವನ್ನಪ್ಪಿದವರು. ಸುನಿಲ್ ಲೋಬೊ ಎಂಬವರ ಮನೆಗೆ ಸುರತ್ಕಲ್‌ನಿಂದ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಕೆಂಪುಗುಡ್ಡೆಯ ನೋರ್ಣಡ್ಕ ಎಂಬಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಸಂಚಾರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಈ ಘಟನೆ ನಡೆದಿದೆ.
ಸುಮಾರು ೨.೩೦ರ ವೇಳೆ ಘಟನೆ ನಡೆದಿದ್ದು, ಈ ಸಂದರ್ಭ ಲಾರಿಯಲ್ಲಿ ದಿನೇಶ್ ಬಾಬು, ಮುಖೇಶ್ ಹಾಗೂ ಚಾಲಕ ರಿಯಾಜ್ ಮತ್ತು ಸುನಿಲ್ ಇದ್ದರು. ಇವರಲ್ಲಿ ಲಾರಿ ಚಾಲಕ ರಿಯಾಝ್ ಸಹಿತ ದಿನೇಶ್, ಬಾಬು, ಮುಖೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಉಳಿದವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಮೃತಪಟ್ಟ ಮಹೇಶ್ ಲಾರಿಯ ಹಿಂಬದಿಯಲ್ಲಿ ಗ್ರಾನೈಡ್‌ಗಳ ಮೇಲೆ ಕುಳಿತಿದ್ದ. ಪಲ್ಟಿಯಾಗುವ ರಭಸಕ್ಕೆ ಗ್ರಾನೈಡ್‌ಗಳು ಅವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ. ಗ್ರಾನೈಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅನ್‌ಲೋಡ್ ಮಾಡಲೆಂದು ಲಾರಿಯಲ್ಲಿ ಬೆಂಜನಪದವಿಗೆ ಬಂದಿದ್ದರು. ಘಟನೆಯ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(more…)