ವಲಯ ಕಾಂಗ್ರೆಸ್ ಮಂಚಿ, ನವಯುಗ ಸ್ಪೋರ್ಟ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್ ಹಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮಶತಾಬ್ದಿ ಪ್ರಯುಕ್ತ ಮಂಚಿ ಕುಕ್ಕಾಜೆಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಬೆಲೂನ್ ಹಾಗೂ ಪಾರಿವಾಳವನ್ನು ಹಾರಿ ಬಿಟ್ಟು ಕ್ರೀಡಾಕೂಟ ಉದ್ಘಾಟಿಸಿದ ಅವರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಂಚಿ ಕುಕ್ಕಾಜೆಯ ಜನತೆ ಹಲವು ವರ್ಷಗಳ ಕಾಲ ನೆನೆಪಿಟ್ಟಿಕೊಳ್ಳುವಂತಹ ಕ್ರೀಡಾಕೂಟ ಇಲ್ಲಿ ಜರುಗುತ್ತಿದೆ. ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಪಂದ್ಯಾಟ ಯಶಸ್ವಿಯಾಗಲಿದೆ ಎಂದು ಶುಭ ಹಾರೈಸಿದರು.
ತುಳು ಚಿತ್ರನಟ ದೇವದಾಸ ಕಾಪಿಕಾಡ್, ಕಬ್ಬಡ್ಡಿ ಸಂಘಟನಾ ಸಮಿತಿಯ ಅಧ್ಯಕ್ಷ ಎಂ.ಎಸ್.ಮಹಮ್ಮದ್, ಕಾರ್ಯದರ್ಶಿ ಬಿ.ಎಂ.ಅಬ್ಬಾಸ್ ಅಲಿ, ಉಪಾಧ್ಯಕ್ಷರಾದ ಇಬ್ರಹಿಂ ಜಿ., ಡಿ.ಕೆ.ಹಂಝ, ಮುಖ್ಯ ಸಲಹೆಗಾರರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬೇಬಿ ಕುಂದರ್, ಚಂದ್ರಹಾಸ ಕರ್ಕೇರಾ, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ನವಯುಗ ಸ್ಪೋಟ್ಸ್ ಕ್ಲಬ್ ಅಧ್ಯಕ ಹಸೈನಾರ್ ಪಿ.ಕೆ., ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಸದಸ್ಯ ಚಂದ್ರಹಾಸ ರೈ, ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಅಬ್ದುಲ್ಲಾ, ಮಂಚಿ ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀಪತಿರಾವ್ ವೇದಿಕೆಯಲ್ಲಿದ್ದರು.
ಭಾರತೀಯ ನೌಕಪಡೆ ಹಾಗೂ ಬಿಈಜಿ ಪುಣೆಯ ಮಧ್ಯೆ ಪ್ರಥಮ ಪಂದ್ಯ ನಡೆಯಿತು. ರಾಷ್ಟ್ರೀಯ ಮಟ್ಟದ ಪ್ರೋ ಕಬಡ್ಡಿ ಪಂದ್ಯಾಟದಲ್ಲಿ ಸ್ಪರ್ಧಿಸಿದ್ದ ಸುರ್ಜಿತ್ ನರ್‍ವಾಲ್ ಹಾಗೂ ನಿತಿನ್ ಥೋಮರ್ ನೌಕಪಡೆ ತಂಡದಲ್ಲಿ ಕ್ರೀಡಾಪಟುಗಳಾಗಿ ಪ್ರೇಕ್ಷಕರ ಗಮನ ಸೆಳೆದರು.