ಆರಂಭಗೊಂಡದ್ದು ಕಳೆದ ವರ್ಷ ನವೆಂಬರ್ 10. ಇಂದು ಮೇ 6. ಅಂದರೆ 178 ದಿನಗಳು ಆದವು. ಇದುವರೆಗೆ ಬಂಟ್ವಾಳನ್ಯೂಸ್ www.bantwalnews.com ಓದಿದವರು 2,20,000 ಮಂದಿ. ನೀವು ಇದನ್ನು ಓದುವ ಹೊತ್ತಿಗೆ ಜಾಸ್ತಿ ಆಗಿರಲೂ ಬಹುದು. ಸರಾಸರಿ ದಿನವೊಂದಕ್ಕೆ 1200ರಷ್ಟು ಮಂದಿ ಬಂಟ್ವಾಳನ್ಯೂಸ್ ನಲ್ಲಿ ಏನಿದೆ ಎಂದು ಇಣುಕಿ ಹೋಗುತ್ತಾರೆ ಎಂಬುದಂತೂ ಸತ್ಯ. ನೂರಾರು ವೆಬ್ ಸೈಟ್ ಗಳು ಸುದ್ದಿಗಳನ್ನು ನಿರಂತರವಾಗಿ ಕೊಡುತ್ತಿರುವ ಮಧ್ಯೆಯೇ ಬಂಟ್ವಾಳನ್ಯೂಸ್ ಜನ್ಮತಳೆಯಿತು. ಇದಕ್ಕೆ ನಿರಂತರ ಸಾಥ್ ನೀಡುತ್ತಿರುವವರು ದೂರದ ಕೊಲ್ಲಿ ರಾಷ್ಟ್ರ, ನಮ್ಮ ಮುಂಬೈ, ದೆಹಲಿ, ಬೆಂಗಳೂರುಗಳಲ್ಲಿ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ಬಂಟ್ವಾಳ ಮೂಲದ ಓದುಗರು ಹಾಗೂ ಬಂಟ್ವಾಳ ತಾಲೂಕು ಸಹಿತ ಜಿಲ್ಲೆಯ ಸಹೃದಯರು. ಪತ್ರಕರ್ತ ಸ್ನೇಹಿತರು ಹಾಗೂ ಜಾಹೀರಾತು ನೀಡಿ ಪ್ರೋತ್ಸಾಹಿಸುತ್ತಿರುವವರು. ಅಂಕಣ ನೀಡುವುದರೊಂದಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಅನಿತಾ ನರೇಶ್ ಮಂಚಿ, ಡಾ.ಅಜಕ್ಕಳ ಗಿರೀಶ ಭಟ್, ಬಿ.ತಮ್ಮಯ್ಯ, ಮೌನೇಶ ವಿಶ್ವಕರ್ಮ, ಡಾ.ರವಿಶಂಕರ್ ಮಾಹಿತಿಪೂರ್ಣವಾಗಿಸಲು ಸಹಕಾರ ನೀಡುತ್ತಿರುವ ತಾಲೂಕಿನ ಎಲ್ಲ ಸರಕಾರಿ ಅಧಿಕಾರಿಗಳು, ಅಧ್ಯಾಪಕರು, ಸಾಹಿತಿಗಳ ಸಹಿತ ಹಲವರು ಬಂಟ್ವಾಳನ್ಯೂಸ್ ಜೊತೆಗಿದ್ದಾರೆ. ವೆಬ್ ಸೈಟ್ ಅನ್ನು ಅಂದವಾಗಿ ವಿನ್ಯಾಸಗೊಳಿಸಿದ ಆದಿತ್ಯ ಕಲ್ಲೂರಾಯ ಅವರಿಗೆ ಕೃತಜ್ಞತೆ. ಸಮಸ್ತ ಓದುಗರಿಗೆ ಈ ಸಂದರ್ಭ ಬಂಟ್ವಾಳನ್ಯೂಸ್ ಪರವಾಗಿ ಧನ್ಯವಾದ.
ಕ್ಲಿಕ್ ಮಾಡ್ತಾ ಇರಿ, ಹೊಸ ಸುದ್ದಿ, ವಿಚಾರಗಳಿಗೆ ಬಂಟ್ವಾಳನ್ಯೂಸ್. www.bantwalnews.com
– ಹರೀಶ ಮಾಂಬಾಡಿ, ಸಂಪಾದಕ, www.bantwalnews.com