ಮಂಗಳೂರು ಹವ್ಯಕ ಸಭಾದಿಂದ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ವಿಷು ಸಂಭ್ರಮ ಸಂಗೀತ ಸೌರಭ ಎಂಬ ವಿನೂತನ ಕಾರ್ಯಕ್ರಮ ಜರಗಿತು. ಅಂದೇ ಆದಿಗುರು ಶ್ರೀಶಂಕರಾಚಾರ್ಯರ ಜಯಂತಿಯೂ ಆಗಿದ್ದರಿಂದ ಶಂಕರರ ಭಾವಚಿತ್ರಕ್ಕೆ ಸಭಾದ ಅಧ್ಯಕ್ಷ ವೇಣುಗೋಪಾಲ ಭಟ್ ಮಾಂಬಾಡಿ, ನಿಕಟ ಪೂರ್ವ ಅಧ್ಯಕ್ಷ ಮೆದು ತಿರುಮಲೇಶ್ವರ ಭಟ್ ಹಾಗೂಪದಾಧಿಕಾರಿಗಳಾದ ಪಾರ್ವತಿ ಭಟ್ ಮೊಂತಿಮಾರು, ಪಿ.ಸುಬ್ರಮಣ್ಯ ಭಟ್, ಗೋವಿಂದ ಭಟ್ ಯಸ್.ಜಿ, ಲೀಲಾವತಿ ರಾವ್, ಲಕ್ಷ್ಮಿ ಪ್ರಸಾದ್ ಪುಷ್ಪ ನಮನ ಸಲ್ಲಿಸಿದರು.
ನಂತರಮಂಗಳೂರಿನ ಪ್ರಸಿದ್ಧ ಸಂಗೀತ ಗುರುಗಳು ವಿದುಷಿಯರಾದ ಜಯಲಕ್ಷ್ಮಿ ಶಾಸ್ತ್ರೀ, ಜಯಲಕ್ಷ್ಮಿ ಪಿ ಭಟ್, ಶ್ಯಾಮಲಾ ಏನ್ ಯಸ್ ಭಟ್, ಅರುಣಾ ಕೆ.ಯಸ್.ಭಟ್ ಅಮೈ,ವೈಜಯಂತಿಕೆ.ಟಿ.ಭಟ್ ಇವರಿಂದ ವೈಯುಕ್ತಿಕ ಕಚೇರಿ ತದನಂತರ ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ ವಿದ್ವತ್ಭರಿತವಾಗಿ, ಸುಶ್ರಾವ್ಯವಾಗಿ ಮೂಡಿಬಂದು ಪ್ರೇಕ್ಷಕರ ಮನಸೂರೆಗೊಂಡಿತು.
ಮೃದಂಗದಲ್ಲಿ ಪ್ರಸಿದ್ಧರಾದ ಮುರಳಿಕೃಷ್ಣ ಕುಕ್ಕಿಲ ಹಾಗೂ ಪಿಟೀಲಿನಲ್ಲಿ ಉದಯೋನ್ಮುಖ ಕಲಾವಿದ ಅನಿಲಕೃಷ್ಣ ಕುಂಬ್ಳೆ ಉತ್ತಮ ಸಾಥ್ ನೀಡಿ ಕಚ್ಛೇರಿಗೆ ರಂಗನ್ನು ನೀಡಿದರು. ಕಚೇರಿಯ ನಂತರ ಸಭಾದ ಅಧ್ಯಕ್ಷ ವೇಣುಗೋಪಾಲ ಭಟ್ ಮಾಂಬಾಡಿ ಕಲಾವಿದರಿಗೆ ಧನ್ಯವಾದ ಸಮರ್ಪಿಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ