ಸೋಶಿಯಲ್ ಡೆಮೋಕ್ರೆಟಿಕ್ ಟ್ರೇಡ್ ಯೂನಿಯನ್(ಎಸ್.ಡಿ.ಟಿ.ಯು) ಮತ್ತು ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಯೂನಿಯನ್ (ಎಸ್.ಡಿ.ಎ.ಯು) ಬಂಟ್ವಾಳ ತಾಲೂಕು ಸಮಿತಿ ದಕ ಜಿಲ್ಲೆ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ನಿಟ್ಟಿನಲ್ಲಿ ತಾಲೂಕು ಕಾರ್ಮಿಕರ ಹಕ್ಕುಗಳಿಗೆ ದ್ವನಿಯಾಗೋಣ,ದುಡಿಯುವ ಕೈಗಳಿಗೆ ಶಕ್ತಿ ತುಂಬೋಣ ಎಂಬ ಘೋಷಣೆಯೋದಿಗೆ ಕಾರ್ಮಿಕರ ದಿನಾಚರಣೆ ಅಂಗವಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟು ರೋಗಿಗಳಿಗೆ ಹಣ್ಣುಹಂಪಲು ವಿತರಿಸವ ಮೂಲಕ ಸೋಶಿಯಲ್ ಡೆಮೋಕ್ರೆಟಿಕ್ ಟ್ರೇಡ್ ಯೂನಿಯನ್ ಬಂಟ್ವಾಳ ತಾಲ್ಲೂಕು ಮತ್ತು ಇದರ ಅಂಗ ಸಂಸ್ಥೆಯಾದ ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಯೂನಿಯನ್ ಬಂಟ್ವಾಳ ತಾಲ್ಲೂಕು ಸಮಿತಿ ಕಾರ್ಮಿಕ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೋಶಿಯಲ್ ಡೆಮೋಕ್ರೆಟಿಕ್ ಟ್ರೇಡ್ ಯೂನಿಯನ್ ಜಿಲ್ಲಾ ಸಂಚಾಲಕರಾದ ಯೂಸುಫ್ ಆಲಡ್ಕ, ಬಂಟ್ವಾಳ ತಾಲೂಕು ಸಂಚಾಲಕ ಕಾದರ್ ಆಲಂಪಾಡಿ, ಪುರಸಭಾ ಸದಸ್ಯ ಇಕ್ಬಾಲ್ ಐ.ಎಮ್.ಅರ್, ಕ್ಷೇತ್ರ ಸಮಿತಿ ಅದ್ಯಕ್ಷ ಶಾಹುಲ್ ಎಸ್.ಎಚ್, ಟ್ರೇಡ್ ಯೂನಿಯನ್ ಉಪಾದ್ಯಕ್ಷ ಅಬೂಬಕ್ಕರ್ ಮದ್ದ, ಆಟೊ ಯೂನಿಯನ್ ಕಾರ್ಯದರ್ಶಿ ಸಂಶುದ್ದೀನ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…