ಕಟ್ಟಡ, ಬಂಡೆ ಏರುವ ಸಾಹಸ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಮ ಅವರ ಸ್ಟಂಟ್ ಪ್ರದರ್ಶನ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಸಂಜೆ 4 ಗಂಟೆಯಿಂದ ಸುಮಾರು 6 ಗಂಟೆವರೆಗೆ ನೂರಕ್ಕೂ ಅಧಿಕ ಜನರನ್ನು ಸೇರಿಸುವಲ್ಲಿ ಸಫಲವಾಯಿತು.
ಬಿ.ಸಿ.ರೋಡಿನಲ್ಲಿ ಅವರನ್ನು ನೋಡುವ ಸಲುವಾಗಿ ಫ್ಲೈಓವರ್ ಸಹಿತ ಕಟ್ಟಡದ ಎದುರು ಸೇರಿದ ನೂರಾರು ಜನರನ್ನು ಕೋತಿರಾಜ್ ನಿರಾಸೆಗೊಳಿಸಲಿಲ್ಲ. ಕಟ್ಟಡವನ್ನು ಅನಾಯಾಸವಾಗಿ ಏರಿದ ಕೋತಿರಾಜ್ ಹಗ್ಗದ ಸಹಾಯದಿಂದ ಇಳಿದು ಮತ್ತೆ ಏರಿ ಸ್ಟಂಟ್ ಪ್ರದರ್ಶಿಸಿದರು. ಕೋತಿರಾಜ್ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಹಾಗೂ ಅವರೊಂದಿಗೆ ಫೋಟೋ ಸೆಶನ್ ಮಾಡಿಸಿಕೊಳ್ಳಲು ನೂರಾರು ಅಭಿಮಾನಿಗಳು ಮುಗಿಬೀಳುವ ದೃಶ್ಯ ಕಂಡುಬಂತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…