ಬಂಟ್ವಾಳ

29ರಿಂದ ಮೇ.2ರವರೆಗಿನ ಸಚಿವ ರಮಾನಾಥ ರೈ ಪ್ರವಾಸ ವಿವರ

ಸಚಿವ ಬಿ.ರಮಾನಾಥ ರೈ ಅವರು ಏ.29ರಿಂದ ಮೇ.2ವರೆಗೆ ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ? ಮಾಹಿತಿ ಇಲ್ಲಿದೆ.

ಶನಿವಾರ 29ರಂದು

ಬೆಳಗ್ಗೆ 10 ಗಂಟೆಗೆ ಮಂಗಳೂರು ಬೈಕಂಪಾಡಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ನೂತನ ಪ್ರಾದೇಶಿಕ ಪರಿಸರ ಪ್ರಯೋಗಶಾಲೆ ಹಾಗೂ ಹಿರಿಯ ಪರಿಸರ ಅಧಿಕಾರಿ ಕಚೇರಿ ಕಟ್ಟಡದ ಶಂಕುಸ್ಥಾಪನೆ, 11ಕ್ಕೆ ಮಂಗಳೂರು ಪುರಭವನದಲ್ಲಿ ವಿಶ್ವ ನೃತ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭ, 11.30ಕ್ಕೆ ಮಂಗಳೂರು ನೆಹರೂ ಮೈದಾನದಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಇದರ ದಶಮನೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಇವರ ಜನ್ಮದಿನಾಚರಣೆ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ದಿ.ಕರಾವಳಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಮಂಗಳೂರು ಅತ್ತಾವರ ಇದರ ನವೀಕೃತ ಕಟ್ಡಡದ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ, ಸಂಜೆ 5ಕ್ಕೆ ನೀರುಮಾರ್ಗ ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ, 5.30ಕ್ಕೆ ಮಂಗಳೂರು ಪುರಭವನದಲ್ಲಿ ಬಸವೇಶ್ವರ ಜಯಂತಿಯ ಉದ್ಘಾಟನಾ ಸಮಾರಂಭ, 6.30ಕ್ಕೆ ಅಂಬೇಡ್ಕರ್ ಯುವಕ ಸಂಘ (ರಿ) ಸಂಗಬೆಟ್ಟು ಇದರ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ.

ಏ.30ರಂದು

ಬೆಳಗ್ಗೆ 10ಕ್ಕೆ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ವಜ್ರಮಹೋತ್ಸವ ಹಾಗೂ ನೂತನ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ, 11ಕ್ಕೆ ಶಂಭೂರು ಪ್ರೌಢಶಾಲೆಯಲ್ಲಿ  ಯುವ ಸಂಗಮ ಸೇವಾ ಟ್ರಸ್ಟ್ (ರಿ) ನರಿಕೊಂಬು ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರದ ಉದ್ಘಾಟನಾ ಸಮಾರಂಭ, ಮಧ್ಯಾಹ್ನ 3ಕ್ಕೆ ಮಸ್ಜಿದುಲ್ ಬದ್ರಿಯಾ ಜುಮಾ ಮಸೀದಿ ಅಜ್ಜಿಕಟ್ಟೆ ಪುತ್ತೂರು ಇದರ ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭ, ಸಂಜೆ 4ಕ್ಕೆ ಶ್ರೀ ನಾಗಬ್ರಹ್ಮ ಸಾನಿಧ್ಯ ಬದಿನಡೆ ಇರ್ವತ್ತೂರು ಇದರ ನಾಗಮಂಡಲದ ಧಾರ್ಮಿಕ ಸಭಾ ಕಾರ್ಯಕ್ರಮ, 5ಕ್ಕೆ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಅಕ್ಷರದಾಸೋಹ ಕಟ್ಟಡದ ಉದ್ಘಾಟನಾ ಸಮಾರಂಭ, 6ಕ್ಕೆ ಶ್ರೀ ಗೋಪಾಕೃಷ್ಣ ದೇವಸ್ಥಾನ ಉಳಿ ಇದರ ಪ್ರತಿಷ್ಠಾ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ, 6.30ಕ್ಕೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ವಿಟ್ಲ, ಮಂಗಳಪದವು ಇದರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ.

ಮೇ.1ರಂದು

ಬೆಳಿಗ್ಗೆ 9.30ಕ್ಕೆ ಮಂಗಳೂರು ಬಜಪೆಯಲ್ಲಿ ಇಂಡಿಗೋ ಪ್ಲೈಟ್ ಉದ್ಘಾಟನಾ ಸಮಾರಂಭ, 10ಕ್ಕೆ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭ, 11ಕ್ಕೆ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರ ಇದರ ಬ್ರಹ್ಮಕಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 6ಕ್ಕೆ ಯಕ್ಷಗಾನ ಬಯಲಾಟ ಸೇವಾ ಸಮಿತಿ ಅಲೆತ್ತೂರು ಸಭಾ ಕಾರ್ಯಕ್ರಮ 7.30ಕ್ಕೆ ಶ್ರೀ ವೀರ ಹನುಮಾನ್ ಮಂದಿರ ಬೆಂಗ್ರೆ, ಮಂಗಳೂರು ಇದರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ.

ಮೇ.2ಕ್ಕೆ

ಬೆಳಿಗ್ಗೆ 10.15ಕ್ಕೆ ಸಚಿವರ ಬಿ.ಸಿ.ರೋಡ್ ಕಚೇರಿಯಲ್ಲಿ ಕೈಗಾರಿಕೆ ಇಲಾಖಾ ವತಿಯಿಂದ ಹೊಲಿಗೆ ಯಂತ್ರ ವಿತರಣೆ, 10.30ಕ್ಕೆ ಬಂಟ್ವಾಳ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಅಲ್ಪಸಂಖ್ಯಾತರ ಇಲಾಖಾ ವತಿಯಿಂದ  ವಿವಿಧ ಸೌಲಭ್ಯಗಳ ಆದೇಶ ಪತ್ರ ವಿತರಣೆ, 11.30ಕ್ಕೆ ಶ್ರೀ ರಾಜ್ಯ ಕೊಡಮಣಿತ್ತಾಯ ಅರಸು ಮುಂಡಿತ್ತಾಯ ಪರಿವಾರ ದೈವಗಳು ಅಮೈಗುತ್ತು ಪಂಜಿಕಲ್ಲು ಇದರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts