ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಕುಕ್ಕಾಜೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಈ ಶಾಲೆಯ ಮಕ್ಕಳು ಉತ್ತಮ ಪ್ರೆಜೆಗಳಾಗಲಿ, ಅವರ ಪ್ರತಿಭೆಗೆ ಇಂತಹಾ ಕಾರ್ಯಕ್ರಮಗಳು ಪ್ರೋತ್ಸಾಹ ಸಿಗುತ್ತದೆ ಎಂದರು. ಮುಖ್ಯ ಅಥಿತಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್, ಜಿ.ಎಂ.ಇಬ್ರಾಹಿಂ, ಕೇಶವ ರಾವ್, ಆಸ್ಯಮ್ಮ, ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಉಪಾಧ್ಯಕ್ಷೆ ನಳಿನಿ, ಶಾಲಾ ನಿವೃತ್ತ ಶಿಕ್ಷಕ ದೂಮಣ್ಣ ರೈ, ನವಯುಗ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಹಸೈನಾರ್ ಪಿ.ಕೆ., ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಗಣೇಶ್ ಐತಾಳ್, ಮೋಹನ್ ಪುಚ್ಚೆಕೆರೆ ಉಪಸ್ಥಿತರಿದ್ದರು.
ಮಾಣಿಲ ಸ.ಫ್ರೌ. ಶಾಲೆಗೆ ಭಡ್ತಿ ಹೊಂದಿದ ದೈಹಿಕ ಶಿಕ್ಷಕ ಉಮಾನಾಥ ರೈ ಮೇರಾವು, ಸೆರ್ಕಳ ಶಾಲೆಗೆ ವರ್ಗಾವಣೆಗೊಂಡ ಸಹಶಿಕ್ಷಕಿ ಸವಿತಾ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿಧ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನೀಡಿ ಮನರಂಜಿಸಿದರು. ವಿಶೇಷ ಆಕರ್ಷಣೆ ಸ್ಟಾರ್ ಕಿಡ್ಸ್ ತಂಡ ಮಂಗಳುರು ಇವರಿಂದ ನೃತ್ಯ ಗಾನ ವೈಭವ ಸಭಿಕರಿಂದ ಮೆಚ್ಚುಗೆ ಪಡೆಯಿತು. ಮುಖ್ಯ ಶಿಕ್ಷಕಿ ರೋಹಿಣಿ ಸ್ವಾಗತಿಸಿ, ಉಪಾಧ್ಯಕ್ಷೆ ನಳಿನಿ ವಂದಿಸಿದರು. ಸಹಶಿಕ್ಷಕರಾದ ಪ್ರಸಾದ್, ಶುಭ, ವೆಂಕಟೇಶ್ ಮತ್ತು ನಾಗಪ್ಪ ಕಾರ್ಯಕ್ರಮ ನಿರೂಪಿಸಿದರು. ಆ ದಿನದ ದ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಹಮೀದ್ ನೆರವೇರಿಸಿದರು. ಶಿಕ್ಷಣ ಸಂಯೋಜಕರಾದ ಪ್ರಕಾಶ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.