ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ವಿಜಯ ಬ್ಯಾಂಕ್ ಕಲ್ಲಡ್ಕ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಸಮಾರಂಭ ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ನಡೆಯಿತು. ಇದೇ ಸ್ಥಳದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ದೃಷ್ಟಿದೋಷ ಕಂಡು ಬಂದ 85 ಗ್ರಾಮೀಣ ಜನರಿಗೆ ನೇತ್ರ ತಜ್ಞರ ತಪಾಸಣಾ ವರದಿಯಂತೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ಬ್ಯಾಂಕಿನಿಂದ ಪ್ರವರ್ತಿತವಾದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರೇಮನಾಥ ಆಳ್ವ, ಮುಖ್ಯ ಕಾರ್ಯನಿರ್ವಹಣಾಕಾರಿಗಳಾದ ಉದಯ ಹೆಗಡೆ, ವರಿಷ್ಠ ಪ್ರಬಂಧಕರಾದ ಬಸಪ್ಪ ಮುಥೋಳ ಮತ್ತು ವಿಜಯ ಬ್ಯಾಂಕ್ ಕಲ್ಲಡ್ಕ ಶಾಖೆಯ ಶಾಖಾಪ್ರಬಂಧಕರಾದ ಡೆರಿಕ್ ಡಿಸೋಜ ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…