ಪಾಕಶಾಲೆಯೇ ವೈದ್ಯಶಾಲೆ

ಸಾರ್ವಕಾಲಿಕ ನೆರವು ನೀಡುವ ಬೆಳ್ಳುಳ್ಳಿ

 

  • ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ


ಬೆಳ್ಳುಳ್ಳಿ ಉಪಕಾರಿ ಎಂಬುದು ಎಲ್ಲರಿಗೂ ಗೊತ್ತು. ಹೇಗೆ ಉಪಕಾರಿ ಎಂಬುದರ ಗುಟ್ಟು ಇಲ್ಲಿದೆ ನೋಡಿ.

 ಬಾಹ್ಯ ಉಪಯೋಗಗಳು :

  1. ಸೊಂಟ ನೋವು ಅಥವಾ ಸೊಂಟ ಹಿಡಿದುಕೊಂಡಾಗ (ಕೊಳ್ಪು ) ಬೆಳ್ಳುಳ್ಳಿಯನ್ನು ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ  ಅರೆದು ನೋವು ಇದ್ದ ಸ್ಥಳಕ್ಕೆ  ಲೇಪಿಸಬೇಕು.
  2. ಸಂಧು ವಾತಗಳಲ್ಲಿ ಊತ ಮತ್ತು ನೋವು ಇದಾಗ ಬೆಳ್ಳುಳ್ಳಿಯನ್ನು ಅರೆದು ಲೇಪಿಸಬೇಕು ಅಥವಾ ಬೆಳ್ಳುಳ್ಳಿಯನ್ನು ಜಜ್ಜಿ ರಸ ತೆಗೆದು ಹಚ್ಚಬೇಕು.
  3. ಪಕ್ಕೆಗಳಲ್ಲಿ ನೋವು ಕಾಣಿಸಿಕೊಂಡಾಗ ಬೆಳ್ಳುಳ್ಳಿ ರಸವನ್ನು ಆ ಜಾಗಕ್ಕೆ ಹಚ್ಚಿ ಚೆನ್ನಾಗಿ ತಿಕ್ಕಬೇಕು. ಬೆಳ್ಳುಳ್ಳಿಯನ್ನು  ಜಜ್ಜಿ ಎಳ್ಳೆಣ್ಣೆಯಲ್ಲಿ ಕಾಯಿಸಿ ಉಜ್ಜಿದರೂ ಆದೀತು.
  4. ತುರಿಕೆಯುಕ್ತ ಚರ್ಮರೋಗಗಳಲ್ಲಿ(fungal infection/ring worm) ಬೆಳ್ಳುಳ್ಳಿಯನ್ನು ಜಜ್ಜಿ ತುರಿಕೆ ಇರುವ ಸ್ಥಳಕ್ಕೆ ಹಾಕಿ ಉಜ್ಜುವುದರಿಂದ ತುರಿಕೆ ಹಾಗು ಚರ್ಮದಲ್ಲಿನ ತೊಂದರೆ ಕಡಿಮೆಯಾಗುತ್ತದೆ.
  5. ವಿಷಯುಕ್ತ ಪ್ರಾಣಿಗಳು ಕಚ್ಚಿದಾಗ ಕಚ್ಚಿದ ಸ್ಥಳಕ್ಕೆ ಬೆಳ್ಳುಳ್ಳಿಯನ್ನು ಅರೆದು ಲೇಪಿಸಬೇಕು. ಇದರಿಂದ ಗಾಯ ಶುದ್ಧಿಯಾಗುತ್ತದೆ ಮತ್ತು ಬೇಗನೆ ವಾಸಿಯಾಗುತ್ತದೆ.
  6. ಮೂಗಿನಲ್ಲಿ ಶೀತದ ಬಾಧೆ ಇದ್ದಾಗ ಬೆಳ್ಳುಳ್ಳಿ ಸಿಪ್ಪೆಯ ಧೂಪವನ್ನು ಮೂಗಿನಲ್ಲಿ ಎಳೆದುಕೊಳ್ಳಬೇಕು. ಇದರಿಂದ ಮೂಗು ಕಟ್ಟುವುದು ಮತ್ತು ಶೀತವು ಕಡಿಮೆಯಾಗುತ್ತದೆ.
  7. ಕಾಲಿನ ಅಡಿಭಾಗದಲ್ಲಿ ತುರಿಕೆ ಇದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ ನೀರಿಗೆ ಹಾಕಿ ಬಿಸಿಮಾದಬೇಕು. ನಂತರ ಆ ನೀರಿನಲ್ಲಿ ಕಾಲನ್ನು ಮುಳುಗಿಸಿ ಇಡಬೇಕು.
  8. ಕಿವಿ ನೋವು ಮತ್ತು ಸೋರುವುದು ಇದ್ದಾಗ ಬೆಳ್ಳುಳ್ಳಿಯನ್ನು ಎಳ್ಳೆಣ್ಣೆಯಲ್ಲಿ ಕಾಯಿಸಿ ಕಿವಿಗೆ ಬಿಡಬೇಕು.
  9. ತಲೆಯಲ್ಲಿ ಹೊಟ್ಟು ಇದ್ದಾಗ ಬೆಳ್ಳುಳ್ಳಿ ಎಣ್ಣೆಯನ್ನು ತಲೆಗೆ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಜಾಸ್ತಿ ಹೊತ್ತು ಇಟ್ಟಲ್ಲಿ ತಲೆ ಬೆಂಕಿ ಬರುತ್ತದೆ.
  10. ಉಗುರಿನ ಬುಡದಲ್ಲಿ ನಂಜು ಮತ್ತು ನೋವು ಇದ್ದಾಗ ಬೆಳ್ಳುಳ್ಳಿಯನ್ನು ಜಜ್ಜಿ ಬೆರಳಿನ ಸುತ್ತ ಲೇಪಿಸಿ ಬಟ್ಟೆಯಿಂದ ಕಟ್ಟಬೇಕು.
  11. ಈಗಷ್ಟೇ ಮೂಡುತ್ತಿರುವ ಕುರದ ಮೇಲೆ ಬೆಳ್ಳುಳ್ಳಿಯನ್ನು ಲೇಪಿಸಿದರೆ ಕುರ ಅಲ್ಲಿಗೇ ಮಾಯವಾಗುತ್ತದೆ. ಎರಡರಿಂದ ಮೂರು ದಿನ ಹಿಂದಿನ ಕುರದ ಮೇಲೆ ಹಚ್ಚಿದರೆ ಬೇಗನೆ ಪಕ್ವವಾಗಿ ಕೀವು ಹೊರ ಬರುತ್ತದೆ.
  12. ತುರಿಕೆಯಿಂದ ಕೂಡಿದ ಮೊಡವೆಗಳ ಮೇಲೆ ಬೆಳ್ಳುಳ್ಳಿಯನ್ನು ಲೇಪಿಸಿದರೆ ಮೊಡವೆ ವಾಸಿಯಾಗುತ್ತದೆ. ಕೆಂಪಗಿರುವ ಪಿತ್ತ ಪ್ರಧಾನವಾದ ಮೊಡವೆಗಳ ಮೇಲೆ ಇದನ್ನು ಹಚ್ಚಬಾರದು.

ಆಭ್ಯಂತರ ಉಪಯೋಗಗಳು ಮುಂದಿನವಾರ……….

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.