ದುರ್ಗಾ ಫ್ರೆಂಡ್ಸ್ ಕ್ಲಬ್ ದೇಶವೇ ತಿರುಗಿ ನೋಡುವಂತಹ ಮಹಾನ್ ಕೆಲಸಕ್ಕೆ ಅಡಿಗಲ್ಲು ಹಾಕಿದೆ ಎಂದು ಬೆಂಗಳೂರಿನ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಟಿ. ಶಿವಕುಮಾರ್ ಹೇಳಿದರು.
ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗ ಫ್ರೆಂಡ್ಸ್ ಕ್ಲಬ್ ಇದರ ದಶಮಾನೋತ್ಸವದ ಅಂಗವಾಗಿ ದಡ್ಡಲಕಾಡು ವಿದ್ಯಾದೇಗುಲವನ್ನು ಲೋಕಾರ್ಪಣಾ ಸಮಾರಂಭದ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮತನಾಡಿದರು. ಅಲ್ ಕಾರ್ಗೋ ಲಾಜಿಸ್ಟಿಕ್ ಲಿ.ನ ನಕ್ರೆ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕಬಡ್ಡಿ ಅಸೋಷಿಯೇಷನ್‌ನ ಉಪಾಧ್ಯಕ್ಷ ಪುರುಷೋತ್ತಮ ಪೂಜಾರಿ ಬಿ., ಉದ್ಯಮಿ ಜಿತೇಂದ್ರ ಕೊಟ್ಟಾರಿ, ಜಿ.ಪಂ. ಮಾಜಿ ಸದಸ್ಯೆ ಸುಲೋಚನಾ ಭಟ್, ಹಿಂದೂ ಯುವ ಶಕ್ತಿಯ ರಮೇಶ್ ಹೆಗ್ಡೆ, ಸಂಜೀವ ಪೂಜಾರಿ, ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ, ಕೇಲ್ದೋಡಿಗುತ್ತು ಕೋಟಿ ಪೂಜಾರಿ, ತಾ.ಪಂ.ಸದಸ್ಯ ಗಣೇಶ್ ಸುವರ್ಣ ತುಂಬೆ, ಎಂ. ಕರುಣೇಂದ್ರ ಪೂಜಾರಿ ಕೊಂಬ್ರಬೈಲು, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷ ಸಾಲ್ಯಾನ್ ಶಂಭೂರು, ರೂಪಾಶ್ರೀ ಗಂಗಾಧರ್, ಪದ್ಮನಾಭ ಮಯ್ಯ ಏಲಬೆ, ಜಿ. ಆನಂದ, ಪಂಜಿಕಲ್ಲು ಗ್ರಾ.ಪಂ. ಸದಸ್ಯ ಸಂಜೀವ ಪೂಜಾರಿ, ಎಸ್‌ಕೆಡಿಪಿಎ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಮಜಿಲ ಗುತ್ತು ಚಂದಪ್ಪ ಅಂಚನ್, ಉಮೇಶ್ ಸುವರ್ಣ, ಸದಾಶಿವ ಡಿ. ತುಂಬೆ, ತಾ.ಪಂ. ಮಾಜಿ ಸದಸ್ಯ ವಸಂತಕುಮಾರ್ ಅಣ್ಣಳಿಕೆ, ದುರ್ಗಾದಾಸ್ ಶೆಟ್ಟಿ, ಜಗದೀಶ ಆಳ್ವ, ರವೀಂದ್ರ ಪೂಜಾರಿ, ಸಂತೋಷ್ ರಾಯಿಬೆಟ್ಟು, ಪುರುಷೋತ್ತಮ ಬಂಗೇರ ನಾಟಿ, ಎಸ್.ಎಮ್ ಗೋಪಾಕೃಷ್ಣ ಆಚಾರ್ಯ, ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ರಘುಸಪಲ್ಯ, ಸೋಮಪ್ಪ ಕೋಟ್ಯಾನ್ ತುಂಬೆ, ದಾಮೋದರ ನೆತ್ತರಕೆರೆ, ಲೋಕೇಶ ಬಂಗೇರ, ಚಂದಪ್ಪ ಪೂಜಾರಿ ದರ್ಖಾಸು, ಆನಂದ ಕೆ. ಕೋಟ್ಯಾನ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಒಲಂಪಿಕ್ ಕ್ರೀಡಾಪಟು ಸಹನ ಕುಮಾರಿ ಅವರನ್ನು ಸನ್ಮಾನಿಸಲಾಯಿತು.
ಪುರಷೋತ್ತಮ ಅಂಚನ್ ಸ್ವಾಗತಿಸಿ, ಪ್ರಕಾಶ್ ಅಂಚನ್ ಪ್ರಸ್ತಾವಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.