ಮಂಗಳೂರು ಮಹಾನಗರಪಾಲಿಕೆಯ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ಯು.ಪಿ. ಮಲ್ಯ ಕ್ರಾಸ್ (ಓಲ್ಡ್ ಕೆಂಟ್) ರಸ್ತೆಯ ದುರಸ್ತಿ ಕಾಮಗಾರಿಯನ್ನು ಮಾಡಲು ಉದ್ದೇಶಿಸಿದ್ದು, ಏಪ್ರಿಲ್ 15 ರಿಂದ ಮೇ. 14 ರವರೆಗೆ ಈ ರಸ್ತೆಯಲ್ಲಿ ಸಂಪೂರ್ಣ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾಮಗಾರಿ ನಡೆಯವ ಸಮಯ ಯು.ಪಿ ಮಲ್ಯ ರಸ್ತೆ ಕ್ರಾಸ್ ಕಡೆಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಕಡೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇಂದ್ರ ಮಾರುಕಟ್ಟೆ – ಕ್ಲಾಕ್ ಟವರ್ ಕಡೆಯಿಂದ ಸೆಂಟರ್ಲ್ ರೈಲು ನಿಲ್ದಾಣ, ಅತ್ತಾವರದ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಕೇಂದ್ರ ಮಾರುಕಟ್ಟೆ ರಥಬೀದಿ ಕಡೆಯಿಂದ ಬಂದು ಕೆ.ಬಿ. ಕಟ್ಟೆ ಬಳಿ ಎಡಕ್ಕೆ ತಿರುಗಿ ಹಂಪನಕಟ್ಟೆ – ಟಾಟಾ ಶೋರೂಮ್ – ಮಿಲಗ್ರೀಸ್ – ನೂರ್ ಮಸೀದಿ ರಸ್ತೆಯ ಮೂಲಕ ಸಂಚರಿಸುವುದು.
ವಾಹನಗಳು ಮುತ್ತಪ್ಪಗುಡಿ – ವೆನ್ಲಾಟಕ್ ಶವಾಗಾರ ರಸ್ತೆ ಮೂಲಕ ಹಂಪನಕಟ್ಟೆ – ಕ್ಲಾಕ್ ಟವರ್ ಕಡೆಗೆ ಸಂಚರಿಸುವುದು. ಈ ನಿರ್ಬಂಧನೆಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ. ಎಂದು ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಮಂಗಳೂರು ನಗರ ಇವರ ಪ್ರಕಟಣೆ ತಿಳಿಸಿದೆ.