ಕೋಲ್ಪೆ-ಇಡ್ಕಿದು ಅನ್ಸಾರುಲ್ ಮುಸ್ಲಿಮೀನ್ ಯಂಗ್‌ಮೆನ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕದ ಪ್ರಯುಕ್ತ ಧಾರ್ಮಿಕ ಉಪನ್ಯಾಕ ಕಾರ್ಯಕ್ರಮ ಏಪ್ರಿಲ್ 29 ರಂದು ಇಲ್ಲಿನ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಯ್ಯಿದ್ ಕೆ.ಎಸ್. ಮುಖ್ತಾರ್ ತಂಙಳ್ ಕುಂಬೋಳ್ ದುವಾಶಿರ್ವಚನಗೈಯಲಿದ್ದು, ಮಿತ್ತೂರು ಕೆಜಿಎನ್ ದಅವಾ ಕಾಲೇಜು ಮ್ಯಾನೇಜರ್ ಮುಹಮ್ಮದ್ ಶರೀಫ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಥಳೀಯ ಖತೀಬ್ ಎ.ಕೆ. ಅಬ್ದುರ್ರಹ್ಮಾನ್ ಸಅದಿ ಅಧ್ಯಕ್ಷತೆ ವಹಿಸುವರು. ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರೆ-ಕೇರಳ ಮುಖ್ಯ ಭಾಷಣಗೈಯುವರು ಎಂದು ಪ್ರಕಟಣೆ ತಿಳಿಸಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…