ಕಲ್ಲಡ್ಕ ಹೃದಯಭಾಗದ ಶ್ರೀರಾಮ ಸಂಕೀರ್ಣದಲ್ಲಿ ನೂತನವಾಗಿ ಆರಂಭಗೊಂಡಿರುವ ವೈಷ್ಣವಿ ಟೆಕ್ಸ್‌ಟೈಲ್ ವಸ್ತ್ರ ಮಳಿಗೆಯನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದರು.
ಶ್ರೀ ರಾಮ ಸಂಕೀರ್ಣದಲ್ಲೀ ಈಗಾಗಲೇ ಎರಡು ಬ್ಯಾಂಕಿಂಗ್ ಸಂಸ್ಥೆಗಳು ಆರಂಭಗೊಂಡಿದೆ. ಇದೀಗ ವಸ್ತ್ರ ಮಳಿಗೆ ಆರಂಭಗೊಂಡಿರುವುದು ಸಂತಸದ ವಿಚಾರ. ಮನುಷ್ಯನ ವ್ಯಕ್ತಿತ್ವಕ್ಕೆ ಒಪ್ಪುವಂತಹ ವಸ್ತ್ರ ಸಂಹಿತೆಗಳು ಬೇಕು. ಅದು ವೈಷ್ಣವಿ ಟೆಕ್ಸ್‌ಟೈಲ್ಸ್‌ನಲ್ಲಿ ಲಭ್ಯವಾಗಲಿದೆ ಎಂದು ಶುಭ ಹಾರೈಸಿದರು.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಶುಭಹಾರೈಸಿ ಮಾತನಾಡಿ ಕಲ್ಲಡ್ಕದಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಸಂಕೀರ್ಣದಲ್ಲಿ ವೈಷ್ಣವಿ ಟೆಕ್ಸ್‌ಟೈಲ್ ಶುಭಾರಂಭಗೊಳ್ಳುವ ಮೂಲಕ ಆಕರ್ಷಣೆಯ ಕೇಂದ್ರವಾಗಿದೆ. ಮುಂದಿನ ದಿನದಲ್ಲಿ ಉತ್ತಮ ವ್ಯಾಪರಿ ಮಳಿಗೆಯಾಗಿ ಇದು ರೂಪುಗೊಳ್ಳಲಿ ಎಂದರು.
ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡರಾದ ರಾಜೇಶ್‌ನಾಕ್ ಉಳಿಪಾಡಿಗುತ್ತು, ಜಗದೀಶ ಅಧಿಕಾರಿ, ದಿನೇಶ್ ಅಮ್ಟೂರು ಮತ್ತಿತರರು ಭೇಟಿ ನೀಡಿ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ಗೋಪಾಲಕೃಷ್ಣ ಭಟ್, ಸುಲೋಚನಾ ಭಟ್, ಜಗದೀಶ ಎಡಪಡಿತ್ತಾಯ, ಚಿತ್ರಾ ಎಡಪಡಿತ್ತಾಯ, ಮಧುರಾ ಹಾಜರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…