ನಮ್ಮ ಮನಸು ಯಾವಾಗಲೂ ನಿರ್ಮಲವಾಗಿರಬೇಕು ಹಾಗಾದಾಗ ಯಶಸ್ಸು ಸಾಧ್ಯ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಬಂಟ್ವಾಳ ಕಸ್ಬಾ ಗ್ರಾಮದ ಮಣಿ ಶ್ರೀ ದುರ್ಗಾಮಾತಾ ದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಆಗಮೋಕ್ತ ಆಚರಣೆಗಳು ದೇವಸ್ಥಾನಗಳನ್ನು ಉಳಿಸುವ ಸಂಕಲ್ಪದಲ್ಲಿರಬೇಕು ಎಂದರು. ಹೊಸ್ಮಾರು ಶ್ರೀ ಕ್ಷೇತ್ರ ಬಲ್ಯೊಟ್ಟುವಿನ ಶ್ರೀ ವಿಖ್ಯಾತನಂದ ಸ್ವಾಮೀಜಿ ಅಶೀರ್ವಚನ ನೀಡಿ ಆಧ್ಯಾತ್ಮಿಕವಾಗಿ ಮನಪರಿವರ್ತನೆ ಮಾಡುವ ಕಾರ್ಯಗಳು ಧಾರ್ಮಿಕ ಕ್ಷೇತ್ರಗಳಿಂದ ನಡೆಯಬೇಕು ಎಂದರು.
ಭೂ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಉದ್ಯಮಿ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗೇರು ಅಭಿವರದ್ದಿ ನಿಗಮದ ನಿರ್ದೇಶಕ ಜಗದೀಶ ಕೊಲ, ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಟ್ವಾಳ, ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಉಪಪ್ರಬಂಧಕ ಭೋಜಕುಲಾಲ್, ಹಿಂದು ಯುವಸೇನೆಯ ಪುಷ್ಪರಾಜ್, ಲೋಕನಾಥ, ನಾವೂರು ಗ್ರಾ.ಪಂ.ಸದಸ್ಯ ಸದಾನಂದ ಗೌಡ, ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್, ಶಿವಮೊಗ್ಗದ ಶಿಲ್ಪಿ ಮಂಜುನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಬಿ.ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ಕುಲಾಲ್ ನಾವೂರು ಪ್ರಸ್ತಾವಿಸಿದರು, ಜಯಂತರಾವ್ ವಂದಿಸಿದರು, ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಸುರೇಶ್ ಪೂಜಾರಿ ಸಹಕರಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)