ಸಂವಿದಾನವನ್ನು ಬಿಗಿದಪ್ಪಿಕೊಂಡು ಒಟ್ಟಾಗಿ ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೊರಾಟ ನಡೆಸಲು ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅಲ್-ಖಝಾನ ಸಬಾಂಗಣದಲ್ಲಿ ಗೆಟು ಗೆದರ್(ಸ್ನೇಹಕೂಟ) ಕಾರ್ಯಕ್ರಮದಲ್ಲಿ ಪ್ರಸಕ್ತ ವಿದ್ಯಾಮನಗಳು ಅದರ ಅಪಾಯದ ಬಗ್ಗೆ ಜಾಗ್ರತಿ ಮೂಡಿಸಿ ಮಾತನಾಡಿದರು .
ದೇಶದಲ್ಲಿ ಧರ್ಮಾಧಾರಿತ ಧ್ರುವೀಕರಣ ನಡೆಯುತ್ತಿದ್ದು, ಮಾಂಸದ ಹೆಸರಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿದೆ. ತಿನ್ನುವ ಆಹಾರಕ್ಕೆ ನಿರ್ಬಂದ ಹೇರಲಾಗುತ್ತಿದ್ದು, ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ. ಅನ್ಯಾಯ, ಅಸಹಿಷ್ಣುತೆ ಪ್ರಶ್ನಿಸಿದವರನ್ನು ದಮನಿಸಲಾಗುತ್ತಿದ್ದು, ಮುಸ್ಲಿಂ ದ್ವೇಷಕ್ಕೆ ಮಾನ್ಯತೆ ಲಭಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪಿ.ಎಫ್.ಐ ಬಂಟ್ವಾಳ ತಾಲೂಕು ಅದ್ಯಕ್ಷ ಇಜಾಝ್ ಅಹಮದ್ ಬಂಟ್ವಾಳ ಕಾರ್ಯಕ್ರಮದ ಅದ್ಯಕ್ಷ ವಹಿಸಿ ಮೇ 2 ಕ್ಕೆ ಮಂಗಳೂರಿನಲ್ಲಿ ನಡೆಯುವ ಮಂಗಳುರು ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು, ಅರಫ ಗ್ರೂಪ್ ಮುಖ್ಯಸ್ಥರಾದ ಸಾವುಞಿ, ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಸಿದ್ದೀಖ್ ಜಿಎಸ್ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಪಿ.ಎಫ್.ಐ ಬಂಟ್ವಾಳ ತಲೂಕು ಸಮಿತಿ ಕಾರ್ಯದರ್ಶಿ ಸೆಲೀಮ್ ಕೆ ಉಪಸ್ಥಿತರಿದ್ದರು, ಬಂಟ್ವಾಳ ತಾಲೂಕಿನ ಮಸೀದಿ ಜಮಾತಿನ ಅದ್ಯಕ್ಷರು ಪದಾದಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಬಾಗವಹಿಸಿದ್ದರು ಪಿ.ಎಫ್.ಐ ಬಿಸಿರೋಡ್ ವಲಯಾದ್ಯಕ್ಷ ಇಮ್ತಿಯಾಝ್ ತುಂಬೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ರಹಿಮಾನ್ ಮಠ ನಿರೂಪಿಸಿ ವಂದಿಸಿದರು