ಸೋಲು ಗೆಲುವು ಎಂಬುದು ಇಲ್ಲದಿದ್ದರೆ ಯಾವುದೇ ಕ್ರೀಡೆ ಪೂರ್ಣವಾಗಲು ಸಾಧ್ಯವಿಲ್ಲ. ಕ್ರೀಡೆಯು ತಂಡಗಳ ನಡುವಿನ ಪೈಪೋಟಿಯಾದರೆ ಅದು ಸಮಾಜ ಕಟ್ಟುವ ಕೆಲಸ ಮಾಡಬೇಕು. ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.
ಯುನೈಟೆಡ್ ಸ್ಫೋರ್ಟ್ಸ್ ಕ್ಲಬ್ ಫರಂಗಿಪೇಟೆ ಇದರ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಎರಡು ವಾರದ ನಾಲ್ಕು ದಿನಗಳ ಕಾಲ ನಡೆದ ಯುನೈಟೆಡ್ ಪ್ರೀಮಿಯಮ್ ಲೀಗ್ ಕ್ರಿಕೇಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುಎಸ್‌ಸಿಎಫ್ ಅಧ್ಯಕ್ಷ ಎಫ್.ಉಮರ್ ಫಾರೂಕ್, ಹಜಾಜ್ ಸ್ಫೋರ್ಟ್ಸ್ ಕ್ಲಬ್‌ನ ಹನೀಫ್ ಹಾಜಿ, ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಸುಹೈಲ್ ಕಂದಕ್, ಮುಸ್ತಫಾ ಕೆಂಪು ಉಪ್ಪಿನಂಗಡಿ ಮಾತನಾಡಿದರು.
ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಅಮೆಮಾರ್ ಯಂಗ್ ಫ್ರಂಡ್ಸ್, ದ್ವಿತೀಯ ಸ್ಥಾನ ಪಡೆದ ಮದರ್ ಇಂಡಿಯಾ ಕುಂಪನಮಜಲು ತಂಡಗಳಿಗೆ ಟ್ರೋಫಿ, ನಗದು ಬಹುಮಾನ ವಿತರಿಸಲಾಯಿತು. ಹಾಗೆಯೇ ಪಂದ್ಯದಲ್ಲಿ ತ್ರಿತೀಯ, ಚತುರ್ಥ ಬಹುಮಾನ, ಉತ್ತಮ ಬ್ಯಾಟ್ಸ್‌ಮ್ಯಾನ್, ಎಸೆತಗಾರ, ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಯೇಸ್, ಶಿಸ್ತಿನ ತಂಡ ಮೊದಲಾದ ಪ್ರಶಸ್ತಿ ವಿತರಿಸಲಾಯಿತು.
ಯುಎಸ್‌ಸಿಎಫ್ ಕಾರ್ಯದರ್ಶಿ ಆಸಿಫ್ ಇಕ್ಬಾಲ್, ಅರ್ಜುನ್ ಕಾಪಿಕಾಡ್, ಖಲೀಲ್ ಹಿಂದುಸ್ತಾನ್, ರೆಸ್ಕೂ ಚಾರಿಟೇಬಲ್ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ, ಇರ್ಫಾನ್ ಕೆ.ಇ.ಎಲ್., ಝಫರುಲ್ಲಾ ಆರ್ಕುಳ, ರಮ್ಲಾನ್ ಮಾರಿಪಳ್ಳ, ಇಕ್ಬಾಲ್ ಮಾರಿಪಳ್ಳ, ಕಾಸಿಂ, ಶಾಫಿ, ಮುಸ್ತಫಾ, ಫೈಝಲ್ ಕುಂಪನಮಜಲು ಮೊದಲಾದವರು ಉಪಸ್ಥಿತರಿದ್ದರು.