ಮುಡಿಪು ಕೋಡಕ್ಕಲ್ಲಿನಲ್ಲಿರುವ ವೀರ ಯೋಧ ಸಂತೋಷ್‌ಕುಮಾರ್ ಅವರ ಮನೆಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಲವರು ಭೇಟಿ ನೀಡಿ ಗೌರವಿಸಿದರು.
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಇಂದು ಇಡೀ ಭಾರತೀಯರೇ ಮೆಚ್ಚತಕ್ಕಂತಹ ಸಾಹಸದ ಯಶೋಗಾಥೆಯ ಕೆಲಸವನ್ನು ಸಂತೋಷ್ ಮಾಡಿದ್ದು, ಅವರೊಂದಿಗೆ ನಾವೆಲ್ಲರೂ ಸೇರಿ ಸಧೃಢ ಭಾರತ ಕಟ್ಟುವ ಕೆಲಸ ಮಾಡೋಣವೆಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ದೇಶವನ್ನು ವೈರಿಗಳಿಂದ ರಕ್ಷಿಸುವ ದೃಷ್ಟಿಯಿಂದ ಉಗ್ರರ ಗುಂಡುಗಳಿಗೆ ಎದೆಯೊಡ್ಡಿ ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಅವರನ್ನು ಸನ್ಮಾನಿಸಲಾಗಿದೆ ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಯೋಧ ಸಂತೋಷ್ ಕುಮಾರ್ ಅವರಿಗೆ ಶಾಲು,ಹಾರ ಹಾಕಿ ಸನ್ಮಾನಿಸಿದರು.
ಧಾರ್ಮಿಕ ಮುಖಂಡರಾದ ವಾಸುದೇವ ಕೊಟ್ಟಾರಿ, ಬಿಜೆಪಿ ಅಲ್ಪ ಸಂಖ್ಯಾತ ಮೋಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ಹಾಜಿ.ಡಾ.ಕೆ.ಎ ಮುನೀರ್ ಬಾವಾ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು, ಯೋಧ ಸಂತೋಷ್‌ರ ತಾಯಿ ವಿಮಲಾ,ಪತ್ನಿ ಶ್ರೀಲತಾ,ತಂಗಿ ಸೌಮ್ಯಲತಾ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…