ನಮ್ಮೂರು

ಅಣಿ ಅರದಲ ಸಿರಿ ಸಿಂಗಾರ

“ಅಣಿ ಅರದಲ ಸಿರಿ ಸಿಂಗಾರ” ಗ್ರಂಥವು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಅರ್ ಅರ್ ಸಿ ಹಾಗೂ ಕ.ಸಾ.ಪ.ಮಹಾರಾಷ್ಟ್ರ ಘಟಕದ ಜಂಟಿ ಆಶ್ರಯದಲ್ಲಿ ನಡೆದ ‘ ಅಣಿ ‘ನಿರ್ಮಾಣ ಹಾಗೂ ‘ಬಣ್ಣಗಾರಿಕೆಯ’ ಮೂರುದಿನಗಳ ಕಮ್ಮಟದ ಹುಟ್ಟುವಳಿಯಾಗಿ ಸಿದ್ಧಗೊಂಡಿದೆ.ಮುಂಬಯಿ ಸಾಹಿತ್ಯ ಬಳಗವು ಈ ಗ್ರಂಥವನ್ನು ಪ್ರಕಟಿಸಿದೆ.

ಭೂತಾರಾಧನೆಯಲ್ಲಿ ಕೋಲ,ನೇಮ,ಬಂಡಿ ಮುಂತಾದ ಆಚರಣೆಗಳಲ್ಲಿ ಪ್ರಧಾನವಾಗಿರುವ ” ಅಣಿ ” ನಿರ್ಮಾಣದ ವಿವಿಧ ಹಂತಗಳು (‘ ಸಿರಿ ‘ಕಲಾತ್ಮಕ ರಚನೆ ) ಹಾಗೂ ಬಣ್ಣಗಾರಿಕೆಯ ನ್ನು ಯಥಾಸಾಧ್ಯ ತೋರಿಸಲಾಗಿದೆ (ಬಣ್ಣದ ಚಿತ್ರ ಗಳ ಮೂಲಕ ). ಈ ಗ್ರಂಥದಲ್ಲಿ 400 ಪುಟಗಳಿವೆ. 200 ಪುಟಗಳಷ್ಟು ಬಣ್ಣದ ಪೋಟೊಗಳಿವೆ.5 ವಿಭಾಗದಲ್ಲಿ ಪೋಟೊಗಳಿವೆ – ಅಣಿ .ಅರದಲ ,ಪದ್ದೆಯಿ ,ಸಿರಿಸಿಂಗಾರ ,ಕಟಿಬಯಿರೂಪ ಎಂಬವಿಭಾಗಗಳು. ಜಾನಪದ – ವೈದಿಕ ವಿದ್ವಾಂಸರ ಲೇಖನಗಳಿವೆ.ಬ್ರಾಹ್ಮಣ ಭೂತಗಳು ,ಮುಸ್ಲಿಂ ಭೂತಗಳು ,ಕುಲೆಭೂತಗಳು ,ಕನ್ನಡಭೂತಗಳು ಮುಂತಾದ ವಿವರಗಳಿವೆ. 10 ಮಂದಿ ಹಿರಿಯ – ಕಿರಿಯ  ಕಲಾವಿದರೊಂದಿಗೆ ನಡೆಸಿದ ಸಂವಾದವಿದೆ. 1435 ಭೂತ (ದೈವ )ಗಳ ಹೆಸರಿನ ಪಟ್ಟಿಯಿದೆ. 200 ಪಾರಿಭಾಷಿಕ ಶಬ್ದಗಳ ದಾಖಲೀಕರಣವಿದೆ.

ಎಚ್ ಬಿ ಎಲ್ ರಾವ್ – ಪ್ರಧಾನ ಸಂಪಾದಕರು. .ಸಂಪಾದಕರು – ಕೆ.ಎಲ್.ಕುಂಡಂತಾಯರು.

ಬೆಲೆ – ರೂ. 1000/-.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts