ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪಲಾಯನ ನಡೆಸಲು ಯತ್ನಿಸಿದ ಮರಳು ಲಾರಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ಮರಕ್ಕಿಣಿಯಲ್ಲಿ ಶನಿವಾರ ನಡೆದಿದೆ.
ವಿಟ್ಲ ಕಡೆಯಿಂದ ಪೆರ್ಲ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ಅಡ್ಯನಡ್ಕ ಗಸ್ತಿನಲ್ಲಿದ್ದ ವಿಟ್ಲ ಪೊಲೀಸ್ ಉಪನಿರೀಕ್ಷಕ ನಾಗರಾಜ್ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಈ ಸಂದರ್ಭ ಲಾರಿಯನ್ನು ನಿಲ್ಲಿಸದೆ ಮುಂಭಾಗಕ್ಕೆ ಚಲಿಸಿ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಲಾರಿಯಿಂದ ಚಾಲಕ ಗುಡ್ಡದಲ್ಲಿ ಓಡಿ ಪರಾರಿಯಾಗಿದ್ದಾನೆ. ಇದನ್ನು ಗಮಿಸಿ ಲಾರಿಯನ್ನು ಪರಿಶೀಲನೆ ನಡೆಸಿದಾಗ ಮರಳು ಪತ್ತೆಯಾಗಿದ್ದು, ಕಳವುಗೈದು ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಕ್ಷಿತ್ ರೈ, ಲೋಕೇಶ್, ರಘುರಾಮ ಭಾಗವಹಿಸಿದ್ದಾರೆ.ಬದಿಯಡ್ಕ ಪೊಲೀಸರು ಅಡ್ಕಸ್ಥಳದಲ್ಲಿ ಮರಳು ಲಾರಿ ವಶಕ್ಕೆ ಪಡೆದಿದ್ದಾರೆ.