ಸಜೀಪಮಾಗಣೆ ಶ್ರೀ ಕ್ಷೇತ್ರ ಮಿತ್ತಮಜಲಿನಲ್ಲಿ ಸಜೀಪ ಬಿಸು ಜಾತ್ರೆ ಆರಂಭಗೊಂಡಿದ್ದು, 16ವರೆಗೆ ನಡೆಯಲಿದೆ.
11ರಂದು ಅಪರಾಹ್ನ 8 ಗಂಟೆಗೆ ಕಾಂತಾಡಿಗುತ್ತಿನಿಂದ ದೈವಂಗಳ ಕಿರುವಾಲು ಬಂದು, ಸಾನದಿಂದ ನಾಲ್ಕೈತ್ತಾಯ ದೈವದ ಭಂಡಾರ ಬಂದ ಬಳಿಕ ರಾತ್ರಿ 10 ಗಂಟೆಗೆ ಕಿರುವಾಲು ಭಂಡಾರ ಮನೆಯಿಂದ ಹೊರಟು, ಅಗರಿಯಲ್ಲಿ ದೈವಂಗಳು ಅಣ್ಣ ತಮ್ಮ ನೇಮ ನೆರವೇರಿದೆ. ಬೆಳಗ್ಗೆ ಬೂಳ್ಯ ಪ್ರಸಾದವಾಗಿ ಕಿರುವಾಲು ಭಂಡಾರದ ಮನೆಗೆ ಬರುವ ಕಾರ್ಯ ನಡೆಯಿತು.
12ರಂದು ರಾತ್ರಿ 8 ಗಂಟೆಗೆ ಭಂಡಾರದ ಮನೆಯಿಂದ ನಗ್ರಿ ಮಾಡಕ್ಕೆ ಹಓಗಿ, ಅಣ್ಣತಮ್ಮಂದಿರು ದೈವಂಗಳ ನೇಮವಾಗಿ ಏ.13ರಂದು ಬಎಳಗ್ಗೆ 7 ಗಂಟೆಗೆ ನಗ್ರಿ ಮಾಡದಿಂದ ಮಿತ್ತಮಜಲು ಕ್ಷೇತ್ರಕ್ಕೆ ಬಂದು ಧ್ವಜಾರೋಹಣ ನೆರವೇರಿತು.
ಏ.11, 12 ಮತ್ತು 13ರಂದು ಮೂರು ದಿನ ಚೆಂಡು ಕಾರ್ಯಕ್ರಮ ನಡೆದಿದ್ದು ಗುರುವಾರ ದೈವದ ವಲಸರಿಯಾಗಿ ರಾತ್ರಿ 9 ಗಂಟೆ ಸುಮಾರಿಗೆ ಉಳ್ಳಾಲ್ತಿ ಅಮ್ಮನವರಿಗೆ ಭಕ್ತರು ಒಪ್ಪಿಸಿದ ಪಟ್ಟೆ ಸೀರೆಗಳ ಏಲಂ ನಡೆಯಿತು. ಗುರುವಾರ ರಾತ್ರಿ 9 ಗಂಟೆಗೆ ದೈವಂಗಳ ವಲಸರಿ, ರಾತ್ರಿ 2 ಗಂಟೆಗೆ ನಾಲ್ಕತ್ತಾಯ ಮೆಚ್ಚಿ ಜಾತ್ರೆ ನಡೆಯಿತು.
14ರಂದು ಶುಕ್ರವಾರ ರಾತ್ರಿ 2 ಗಂಟೆಗೆ ಕಾಂತಾಡಿಗುತ್ತು ಮನೆತನದ ಕೆರೆನೇಮ ಅಣ್ಣ ದೈವಂಗಳಿಗೆ ನಡೆಯಲಿದೆ. 15ರ ಶನಿವಾರ ಬೆಳಗ್ಗೆ 7.30ಕ್ಕೆ ತಮ್ಮ ದೈವಂಗಳು ಕೆರೆನೇಮ, ಬೆಳಗ್ಗೆ 10 ಗಂಟೆ ನಂತರ ಉಡುಕುಬಲಿ ಸೇವೆ, ಬೂಳ್ಯ ವಿತರಣೆ, ಮಧ್ಯಾಹ್ನ ಅನ್ನ ಸಂತರ್ಪಣೆ., 16ರ ರವಿವಾರ ಪರಿವಾರ ದೈವಗಳ ನೇಮ, ಬೆಳಗ್ಗೆ ಜುಮಾದಿಬಂಟ, ಮಲರಾಯ, ಪಿಲಿಚಾಮುಂಡಿ ದೈವಗಳಿಗೆ ನೇಮ, ನಂತರ ಮಧ್ಯಾಹ್ನ 2 ಗಂಟೆಗೆ ಕಿರುವಾಲು ಇಳಿಯುವುದು ಎಂದು ಪ್ರಕಟಣೆ ತಿಳಿಸಿದೆ.