ಬಂಟ್ವಾಳ

ಮಜಿ ವೀರಕಂಭ ಶಾಲೆಯಲ್ಲಿ ಪ್ರತಿಭಾಸಂಭ್ರಮ, ಹೆಜ್ಜೆ ಗೆಜ್ಜೆ ನಿನಾದ ಕಾರ್ಯಕ್ರಮ

 

ಗ್ರಾಮವೊಂದು ಸುಭಿಕ್ಷವಾಗಿ ಇರಬೇಕಾದರೆ ಶಾಲೆಗಳು ಬೆಳವಣಿಗೆ ಹೊಂದಬೇಕು. ಕೇವಲ ಸರಕಾರ ಮತ್ತು ಜನಪ್ರತಿನಿಧಿಗಳಿಂದಷ್ಟೇ ಶಾಲೆ ನಡೆಯುವುದಲ್ಲ, ಪಾಲಕರ ಮತ್ತು ವಿದ್ಯಾಭಿಮಾನಿಗಳ ಸಹಕಾರವೂ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು.

ಮಜಿ ವೀರಕಂಭ ಶಾಲೆಯಲ್ಲಿ 96ರ ಪ್ರತಿಭಾಸಂಭ್ರಮ ಹೆಜ್ಜೆ ಗೆಜ್ಜೆ ನಿನಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ಮೌಲ್ಯಯುತವಾದ ಶಿಕ್ಷಣ ಪಡೆದಾಗ ಉತ್ತಮ ಭವಿಷ್ಯ ಕಾಣಲು ಸಾಧ್ಯವಿದೆ. ಎಂದು ತಿಳಿಸಿದರು.

ಎಸ್.ಕೆ.ಪಿ.ಎ ಬಂಟ್ವಾಳ ವಲಯದ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಮಾತನಾಡಿ, ಎಸ್.ಕೆ.ಪಿ.ಎ ಬಂಟ್ವಾಳ ವಲಯವು ಉಚಿತ ಬರವಣಿಗೆ ಹಾಗೂ ಲೇಖನ ಸಾಮಾಗ್ರಿಗಳನ್ನು  ಒದಗಿಸುವುದು, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಲು ಪಠ್ಯೇತರ ಚಟುವಟಿಕೆಗಳನ್ನು ನೆರವೇರಿಸುವುದು, ಯುವ ಜನತೆಗೆ ಕಾನೂನು ಮಾಹಿತಿ ಶಿಬಿರದಂತಹ ಹಲವಾರು ಕಾರ್‍ಯಕ್ರಮಗಳನ್ನು ನೆರವೇರಿಸುತ್ತಿದೆ. ಇದೇ ರೀತಿ ಆದರ್ಶ ಜೀವನಕ್ಕಾಗಿ ಇಂದು ಶಿಕ್ಷಣ ದೊರಕಬೇಕಾಗಿದೆ ಅದಕ್ಕಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸೋಣ ಎಂದರು.

ಬಂಟ್ವಾಳ ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ ಮಾತನಾಡಿ ಪೋಷಕರು ಮಗುವಿಗೆ ಉತ್ತಮ ಶಿಕ್ಷಣ ನೀಡಿದಾಗ ನಮ್ಮಲ್ಲೇ ಮತ್ತೊಬ್ಬ ಮಹಾ ಪುರುಷನ ಉದಯವಾಗಲು ಸಾದ್ಯವಿದೆ ಎಂದರು.

ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ ಮಾತನಾಡಿ, ಕೇವಲ ಒಬ್ಬ ಪೋಷಕ ತನ್ನ ಮಗುವಿನ ಕುರಿತು ಯೋಚಿಸದೇ ಶಾಲೆಯ ಎಲ್ಲಾ ಮಕ್ಕಳ ಹಿತದೃಷ್ಟಿಯಿಂದ ಒಂದಾಗಿ ಯೋಚಿಸಬೇಕುಎಂದು ತಿಳಿಸಿದರು.

ಗ್ರಾ.ಪಂ.ಸದಸ್ಯರಾದ ಜಯಂತಿ, ರಾಮಚಂದ್ರ ಪ್ರಭು, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್, ಕೇಸರಿ ಫ್ರೆಂಡ್ಸ್  ಅಧ್ಯಕ್ಷ ಜಗದೀಶ್, ಯುವ ಶಕ್ತಿ ಫ್ರೆಂಡ್ಸ್ ಬಳಗದ ಅಧ್ಯಕ್ಷ ರವಿ, ಯುವ ಫ್ರೆಂಡ್ಸ್ ಬಳಗದಅಧ್ಯಕ್ಷ ಶಿವಾನಂದ ಭಾಗವಹಿಸಿದ್ದರು.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಹುಮಾನವನ್ನು ವಿತರಿಸಲಾಯಿತು. ಶಾಲಾ ನಾಯಕ ತರುಣ್ ನನ್ನು ಉತ್ತಮ ನಿರ್ವಹಣೆಗಾರ ಪ್ರಶಸ್ತಿ ಹಾಗೂ ತಾ. ಕಲಿಕೋತ್ಸವದಲ್ಲಿ ಬಹುಮಾನ ಪಡೆದ ಪುಣ್ಯಶ್ರೀ ಹಾಗೂ ಚಿರಾಗ್ ರವರನ್ನು ಅಭಿನಂದಿಸಲಾಯಿತು.

ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಕಾರ್‍ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ಶಿPಕಿಯರಾದ ಶಕುಂತಳಾ, ಸಿಸಿಲಿಯಾ, ತನುಜ, ಹಾಗೂ ಜ್ಯೋತಿ ಸಹಕರಿಸಿದರು.

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ