ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ಸಿಡಿಲಾಘಾತಕ್ಕೆ ಮೂವರು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಮಧ್ಯಾಹ್ನದ ಬಳಿಕ ಸಂಭವಿಸಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡ್ಯಾಗೇರಹಳ್ಳಿ ನಿವಾಸಿಗಳಾದ ಜಯಣ್ಣ ಎಂಬವರ ಪತ್ನಿ ಜಯಮ್ಮ (28), ತಿಮ್ಮಯ್ಯ ಎಂಬವರ ಪತ್ನಿ ಕಣಕಮ್ಮ (29) ಹಾಗೂ ಈರಣ್ಣ ಎಂಬವರ ಪುತ್ರಿ ಶಶಿಕಲಾ (7) ಸಾವನ್ನಪ್ಪಿದವರು. ಲಿಖಿತಾ ಎಂಬ ಎರಡು ವರ್ಷದ ಮಗು ಗಾಯಗೊಂಡಿದ್ದು ಆಕೆಯನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ರವೀಶ್, ಸಿಐ ಮಂಜಯ್ಯ, ಎಸ್ಸೈ ರಕ್ಷಿತ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ. ಶೀತಲ್. ಸೀತಾರಾಮ ಕಮ್ಮಾಜೆ ತಾಲೂಕು ಆಡಳಿತ, ಬಂಟ್ವಾಳ ಆರ್. ಐ ನವೀನ್. ವಿ.ಎ ಜನಾರ್ಧನ, ಪುರಸಭಾ ಸದಸ್ಯ ಗೋವಿಂದ ಪ್ರಭು ಸಹಿತ ಪ್ರಮುಖರು ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ಸಹಕರಿಸಿದರು.