ನೇರಳಕಟ್ಟೆ ಗಣೇಶನಗರದಲ್ಲಿ ಯಂಗ್ ಚಾಲೆಂಜರ್‍ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ಆಶ್ರಯದಲ್ಲಿ ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಬಳಿ ಸೋಮವಾರ ನಡೆಯಿತು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸುಳ್ಯ ಶ್ರೀ ವೆಂಕಟರಮಣ ಸಹಕಾರಿ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ಅವರು, ದೈವಾರಾಧನೆ ತುಳು ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಈ ಪರಂಪರೆಯನ್ನು ಉಳಿಸಲು ಯುವ ಜನರು ಮುಂದಾಗಬೇಕಾಗಿದೆ ಎಂದರು.
ಮುಖ್ಯಅತಿಥಿಗಳಾಗಿ ವಿಟ್ಲ ಬಸ್ ಚಾಲಕರ ಸಂಘದ ಕಾರ್ಯದರ್ಶಿ ಭೋಜ ನಾರಾಯಣ, ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ, ಶಿವಾಜಿ ಫ್ರೆಂಡ್ಸ್ ಅಧ್ಯಕ್ಷ ಜನಾರ್ದನ, ಪೆರಾಜೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನಿತ್ ಶೆಟ್ಟಿ, ಅನಂತಾಡಿ ಕ್ರಿಕೆಟರ್‍ಸ್ ಅಧ್ಯಕ್ಷ ಕಿಶೋರ್ ಕುಮಾರ್, ಕೆದಿಲ ಸ್ನೇಹಾಂಜಲಿ ಫ್ರೆಂಡ್ಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ನೇರಳಕಟ್ಟೆ ಗುಡ್ಡೆ ಚಾಮುಂಡೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಚಂದ್ರಕುಲಾಲ್, ಪೆರಾಜೆ ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಭಾಗವಹಿಸಿದ್ದರು.
ಇದೇ ವೇಳೆ ಸಹಾಯಕ ಸಂಚಾರಿ ನಿರೀಕ್ಷಕ ದೇವಪ್ಪ ಗೌಡ, ಸೈನಿಕರಾದ ನಿತೇಶ್ ಕುಲಾಲ್, ಉದಯಶಂಕರ್, ವಿನಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಯಂಗ್ ಚಾಲೆಂಜರ್‍ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಜಯಂತ ಆಚಾರ್ಯ, ಅಧ್ಯಕ್ಷ ಶೀತಲ್ ಕುಮಾರ್, ಗೌರವ ಕಾರ್ಯದರ್ಶಿ ಮೋಹನ್ ಆಚಾರ್ಯ, ಕೋಶಾಧಿಕಾರಿ ಸತೀಶ್ ಆಚಾರ್ಯ, ಜತೆ ಕಾರ್ಯದರ್ಶಿ ಉಪೇಂದ್ರ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್, ಶ್ರೀನಾಥ, ಸಾಂಸ್ಕೃತಿಕ ಕಾರ್ಯದರ್ಶಿ ಲೋಕೇಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ವಿಶುಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್ ಬಿ ವಂದಿಸಿದರು. ಶಿಕ್ಷಕ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ಸ್ಥಳೀಯ ಕಲಾವಿದರಿಂದ ಮಾಗಧವಧೆ ತಾಳಮದ್ದಳೆ, ಕಲ್ಲಡ್ಕದ ನಾಟ್ಯ ವೇದ ಡ್ಯಾನ್ಸ್ ಸ್ಟುಡಿಯೋ ಡ್ಯಾನ್ಸ್ ಡ್ಯಾನ್ಸ್, ಸುನಿಲ್ ನೆಲ್ಲಿಗುಡ್ಡೆ ಹಾಗೂ ಅರುಣ್ ಚಂದ್ರ ಹರಿಣಿ ಕಲಾವಿದರಿಂದ ತೆಲಿಕೆದ ಬರ್ಸ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.