ಬಂಟ್ವಾಳ

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಬಂಟ್ವಾಳ ತಾಲೂಕು ಸಮಿತಿ ರಚನೆ

 

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ, ಆದಿದೈವ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರ ಗುರುಪೀಠ ಪುನರುತ್ಹಾನದ ಬಗ್ಗೆ ಬಂಟ್ವಾಳ ತಾಲೂಕು ಮಟ್ಟದ ಸಮಾಲೋಚನಾ ಸಭೆ, ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ತಾಲೂಕು ಸಮಿತಿ ರಚನೆ ಭಾನುವಾರ ಮೆಲ್ಕಾರ್ ಬಿರ್ವ ಸೆಂಟರ್‌ನ ಸಭಾಂಗಣದಲ್ಲಿ ನಡೆಯಿತು.

ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ನಿರ್ಮಾಣ ಕಾರ್‍ಯಕ್ಕೆ ಈಗಾಗಲೇ ಚಾಲನೆ ದೊರೆತಿದ್ದು ರಾಜ್ಯ, ದೇಶ, ವಿದೇಶಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತುಳುನಾಡಿನ ಅನೇಕ ಕಡೆಗಳಲ್ಲಿ ಈಗಾಗಲೇ ಕ್ಷೇತ್ರದ ಸಮಿತಿಗಳು ರಚನೆಗೊಂಡು ಪ್ರಚಾರ ಕಾರ್‍ಯದಲ್ಲಿ ನಿರತವಾಗಿದೆ. ಮುಂದಿನ ಫೆಬ್ರವರಿ ತಿಂಗಳಿಗೆ ಕ್ಷೇತ್ರವು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಲಿದ್ದು ಈ ನಿಟ್ಟಿನಲ್ಲಿ ಸಮಸ್ತ ಭಾಂದವರು ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.

ಕ್ಷೇತ್ರದ ಕಾರ್ಯಾದ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಮೂಲಸ್ಥಾನದ ಪುನರ್‌ನಿರ್ಮಾಣದ ಕಾರ್‍ಯದಲ್ಲಿ ಕೈಜೋಡಿಸುವುದು ನಮ್ಮೆಲ್ಲರ ಸುಯೋಗವಾಗಿದೆ. ನಾಡಿನಾದ್ಯಂತ ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಕೋಟಿ ಚೆನ್ನಯರಿಗೆ ಇದೇ ಮೊದಲ ಬಾರಿಗೆ ತಮ್ಮ ಜನ್ಮಸ್ಥಳದಲ್ಲೇ ಉಪಾಸಣೆ ಪಡೆಯುವ ಸುವರ್ಣ ಕಾಲ ಕೂಡಿಬಂದಿರುವುದು ಸಮಸ್ತ ಭಕ್ತರ ಪಾಲಿಗೆ ಆಶಾಕಿರಣವಾಗಿದೆ ಎಂದರು.

ಕ್ಷೇತ್ರದ ಟ್ರಸ್ಟಿ ಸಂಜೀವ ಪೂಜಾರಿ ಬೊಳ್ಳಾಯಿ ವಿಜ್ಞಾಪನಾ ಪತ್ರ ಬಿಡುಗಡೆ ಗೊಳಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಸಂಚರಿಸಿ ಸಮಿತಿ ರಚಿಸಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕಾರ್‍ಯಯೋಜನೆ ರೂಪಿಸಲಾಗುವುದು ಎಂದರು.

ಸಂಜೀವ ಪೂಜಾರಿ ಬೊಳ್ಳಾಯಿ ಗೌರವಾಧ್ಯಕ್ಷ, ಪ್ರೇಮನಾಥ್ ಕೆ.ಅಧ್ಯಕ್ಷ, ಚೆನ್ನಪ್ಪ ಆರ್.ಕೋಟ್ಯಾನ್ ಕಾರ್ಯಾಧ್ಯಕ್ಷ, ವಿಜೀತ್ ಕೋಟ್ಯಾನ್ ಪ್ರಧಾನ ಕಾರ್‍ಯದರ್ಶಿ, ಚೇತನ್ ಮುಂಡಾಜೆ ಕೋಶಾಕಾರಿಯಾಗಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನ ಬಂಟ್ವಾಳ ತಾಲೂಕು ಸಮಿತಿಯನ್ನು ರಚಿಸಿ ತಾಲೂಕಿನ ವಲಯಗಳಿಂದ ಪದಾಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕ್ಷೇತ್ರದ ಪ್ರಮುಖರಾದ ಜಯಂತ ನಡುಬೈಲ್, ರವಿ ಪೂಜಾರಿ ಚಿಲಿಂಬಿ, ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್ ಪುತ್ತೂರು, ಜಯಾನಂದ ಎಂ., ದೀಪಕ್ ಕೋಟ್ಯಾನ್ ಗುರುಪುರ, ಸಂತೋಷ್ ಕೊಟ್ಟಿಂಜ, ಬಂಟ್ವಾಳ ತಾಲೂಕಿನ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ಬಿ.ತಮ್ಮಯ, ಯಶವಂತ ದೇರಾಜೆ, ಅರುಣ್ ಕುಮಾರ್, ಸಂತೋಷ್ ಪೂಜಾರಿ, ಬೇಬಿ ಕುಂದರ್, ಚಂದ್ರಶೇಖರ ಉಚ್ಚಿಲ್, ಜಯಂತಿ, ಶಾರದಾ, ನಾರಾಯಣ ಸಾಲ್ಯಾನ್, ಮಾರಪ್ಪ ಸುವರ್ಣ, ಬೂಬ ಪೂಜಾರಿ ಕುದ್ಕಂದೋಡಿ, ಹೇಮಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಪ್ರೇಮನಾಥ್ ಕೆ.ಸ್ವಾಗತಿಸಿದರು. ಪ್ರಧಾನ ಕಾರ್‍ಯದರ್ಶಿ ವಿಜಿತ್ ಕೋಟ್ಯಾನ್ ವಂದಿಸಿದರು. ರಂಗನಿರ್ದೇಶಕ ಗೋಪಾಲ ಅಂಚನ್ ಕಾರ್‍ಯಕ್ರಮ ನಿರೂಪಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ