ಬಂಟ್ವಾಳ

“ಮೆಲು ದನಿ” ಸಂಗೀತ-ರಂಗಕಲೆ ಶಿಬಿರ

ಯಕ್ಷಲೋಕ ಸಾಂಸ್ಕೃತಿಕ ಸಂಗಮ ಬಿ.ಸಿ.ರೋಡು ಆಶ್ರಯದಲ್ಲಿ ಮಕ್ಕಳು ಹಾಗೂ ಆಸಕ್ತ ಸಾರ್ವಜನಿಕರಿಗಾಗಿ “ಮೆಲು ದನಿ” ಸಂಗೀತ ಮತ್ತು ರಂಗಕಲೆ ಶಿಬಿರವು ಎಪ್ರಿಲ್ 15 ರಿಂದ ಎಪ್ರಿಲ್ 21 ರವರೆಗೆ ಬಿ.ಸಿ.ರೋಡು ಬಸ್ಸು ನಿಲ್ದಾಣದ ಹಿಂಭಾಗದ ರಾಜರಾಜೇಶ್ವರೀ ಕಾಂಪ್ಲೆಕ್ಸ್‌ನಲ್ಲಿರುವ ಯಕ್ಷಲೋಕ ಜೀವನ ಕೌಶಲ್ಯ ತರಬೇತಿ ಕೇಂದ್ರದಲ್ಲಿ ನಡೆಯಲಿದೆ ಎಂದು ಶಿಬಿರದ ಸಂಯೋಜಕಿ ಪ್ರತಿಮ ಗೋಪಾಲ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಬಿರವು ಪ್ರತಿ ದಿನ ಬೆಳಿಗ್ಗೆ 9.30 ರಿಂದ ಸಂಜೆ 4.30 ರ ತನಕ ನಡೆಯಲಿದ್ದು ಆಸಕ್ತರು ತಮ್ಮ ಹೆಸರನ್ನು ಮೊ: 8747916790 ದೂರವಾಣಿ ಮೂಲಕ ಅಥವಾ ಕೇಂದ್ರದ ಕಚೇರಿಯಲ್ಲಿ ನೋಂದಾಯಿಸಬಹುದಾಗಿದೆ. ಶಿಬಿರದಲ್ಲಿ ಪರಿಸರ ಗೀತೆ, ಭಕ್ತಿಗೀತೆ, ಜಾನಪದ ಗೀತೆ, ಜಾಗೃತಿ ಗೀತೆ, ರಂಗಗೀತೆ, ಭಾವಗೀತೆ, ಚಿತ್ರಗೀತೆ, ಅಭಿನಯ, ಸಂಭಾಷಣೆ, ರಂಗ ಚಟುವಟಿಕೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts