ಸಮಾಜದಲ್ಲಿ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ, ಅಸ್ಪೃಶ್ಯತೆ ನಿಲ್ಲಬೇಕಾದರೆ ಪ್ರತಿ ಗ್ರಾಮದಲ್ಲೂ ಮಹಾವೀರ ಜಾಗೃತಿ ಜಾಥಾ ನಡೆಯಲಿ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಹೇಳಿದ್ದಾರೆ.
ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಭಾನುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಹಾವೀರ ಮಾರ್ಗದಲ್ಲಿ ನಡೆದರೆ, ಆ ಸಮಾಜದಲ್ಲಿ ಭ್ರಷ್ಟಾಚಾರ, ಅನಾಚಾರ ನಿರ್ಮೂಲನೆ ಮಾಡಲು ಸಾಧ್ಯ ಎಂದರು. ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಆದಿರಾಜ ಜೈನ್, ಸುಭಾಷ್ ಚಂದ್ರ ಜೈನ್ ಶುಭ ಹಾರೈಸಿದರು.
ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್, ಭಾಸ್ಕರ ರಾವ್, ಕಂದಾಯ ನಿರೀಕ್ಷಕರಾದ ದಿವಾಕರ್, ನವೀನ್, ತಾಲೂಕು ಆಡಳಿತ ಶಾಖಾ ಸಿಬ್ಬಂದಿ ಸೀತಾರಾಮ ಕಮ್ಮಾಜೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ಜೈನ ಸಮಾಜದ ಮುಖಂಡರಾದ ಭರತ ರಾಜ ಜೈನ್, ಜಯಕೀರ್ತಿ ಇಂದ್ರ, ವಿಜಯ ಕುಮಾರಿ ಇಂದ್ರ, ಉಪಸ್ಥಿತರಿದ್ದರು. ತಾಲೂಕು ಕಚೇರಿಯ ಮಹೇಂದ್ರ. ಗ್ರಾಮ ಕರಣಿಕರಾದ ಪ್ರವೀಣ್. ಅಶ್ವಿನಿ. ಸ್ವಾತಿ ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ. ಶೀತಲ್. ಮಾದವ. ಗಿಲ್ಬರ್ಟ್ ಪಿಂಟೋ ಹಾಜರಿದ್ದರು. ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿ, ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್ ವಂದಿಸಿದರು.