ಜಿಲ್ಲಾ ಸುದ್ದಿ

ಕುಡ್ಲ ಎಕ್ಸ್ ಪ್ರೆಸ್ ಹೊರಟಿತು ಬೆಂಗಳೂರಿಗೆ

ಕೊನೆಗೂ ಕುಡ್ಲ ಎಕ್ಸ್ ಪ್ರೆಸ್ ಮಂಗಳೂರಿಂದ ಹೊರಟಿದೆ. ಬೇಸರದ ವಿಷಯವೆಂದರೆ ಮಂಗಳೂರಿನ ಕಂಕನಾಡಿ ರೈಲು ನಿಲ್ದಾಣದಿಂದ ಹೊರಟು ಯಶವಂತಪುರದಲ್ಲಿ ಇದು ನಿಲ್ಲುತ್ತದೆ. ಕಂಕನಾಡಿಯಿಂದ ಮಂಗಳೂರು ಪೇಟೆಯೊಳಗೆ ಹೋಗುವವರಿಗೂ ಯಶವಂತಪುರದಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಹೋಗುವವರಿಗೂ ಮತ್ತೆ ಟ್ಯಾಕ್ಸಿಯೋ, ಆಟೋ ಅಥವಾ ಸಿಟಿ ಬಸ್ಸು ಹುಡುಕಿ ಹೋಗಬೇಕಾದ ಅನಿವಾರ್ಯತೆ. ಇಲ್ಲಿಂದಾದರೂ ಹೊರಟಿತಲ್ಲ ಎಂಬುದಷ್ಟೇ ಸಮಾಧಾನ.

ಜಾಹೀರಾತು

ಭಾನುವಾರ ರೈಲ್ವೆ ಸಚಿವ ಸುರೇಶ ಪ್ರಭು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರೆ, ಮಂಗಳೂರು ಜಂಕ್ಷನ್ ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ. ಆರ್. ಲೋಬೊ,  ಐವನ್ ಡಿಸೋಜ,ಮಂಗಳೂರು ಮೇಯರ್ ಕವಿತಾ ಸನಿಲ್, ಜಿಪಂ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಸಹಿತ ವಿವಿಧ ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕುಡ್ಲ ಎಕ್ಸ್ ಪ್ರೆಸ್ ಒಟ್ಟು 14 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ದ್ವಿತೀಯ ದರ್ಜೆ ಚೆಯರ್‌ ಕಾರ್‌, 8 ಜನರಲ್‌ ಸೆಕೆಂಡ್‌ ಕ್ಲಾಸ್‌ ಬೋಗಿಗಳು, 2 ಸೆಕೆಂಡ್‌ಕ್ಲಾಸ್‌ ಲಗೇಜ್‌ -ಕಮ್‌-ಬ್ರೇಕ್‌ವ್ಯಾನ್‌ ಅಂಗವಿಕಲ ಬೋಗಿಗಳು ಸೇರಿವೆ.

ರೈಲು ನಂ.16576 ಮಂಗಳೂರು ಜಂಕ್ಷನ್‌-ಯಶವಂತ ಪುರ ರೈಲು ಗಾಡಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಗ್ಗೆ 11.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. 11.56ಕ್ಕೆ ಬಂಟ್ವಾಳಕ್ಕೆ ಬಂದು 11.58ಕ್ಕೆ ನಿರ್ಗಮಿಸಲಿದೆ. ಕಬಕಪುತ್ತೂರಿಗೆ 12.20ಕ್ಕೆ ಆಗಮಿಸಿ 12.22ಕ್ಕೆ ತೆರಳಲಿದೆ. ಸುಬ್ರಹ್ಮಣ್ಯ ರಸ್ತೆ ಸ್ಟೇಷನ್‌ಗೆ ಮಧ್ಯಾಹ್ನ 1.05ಕ್ಕೆ ಆಗಮಿಸಿ 1.10ಕ್ಕೆ ನಿರ್ಗಮಿಸಲಿದೆ. ಸಕಲೇಶಪುರಕ್ಕೆ 3.35ಕ್ಕೆ ಬಂದು 3.45ಕ್ಕೆ ತೆರಳಲಿದೆ. ಹಾಸನಕ್ಕೆ 4.45ಕ್ಕೆ ಬಂದು 4.50ಕ್ಕೆ ಹೊರಡಲಿದೆ. ಚೆನ್ನರಾಯಪಟ್ಟಣಕ್ಕೆ ಸಂಜೆ 5.28ಕ್ಕೆ ಆಗಮಿಸಿ 5.30ಕ್ಕೆ ತೆರಳಲಿದೆ. ಶ್ರವಣಬೆಳಗೂಳಕ್ಕೆ 5.40ಕ್ಕೆ ಬಂದು 5.42ಕ್ಕೆ ನಿರ್ಗಮಿಸಲಿದೆ. ಬಿ.ಜಿ.ನಗರಕ್ಕೆ 6.19ಕ್ಕೆ ಆಗಮಿಸಿ 6.20ಕ್ಕೆ ಹೊರಡಲಿದೆ. ಯೆಡಿಯೂರಿಗೆ 6.34ಕ್ಕೆ ಬಂದು 6.35 ಕ್ಕೆ ತೆರಳಲಿದೆ. ಕುಣಿಗಲ್‌ಗೆ 6.53ಕ್ಕೆ ಬಂದು 6.54ಕ್ಕೆ ನಿರ್ಗಮಿಸಲಿದೆ. ನೆಲಮಂಗಲಕ್ಕೆ 7.39ಕ್ಕೆ ಆಗಮಿಸಲಿದ್ದು 7.40ಕ್ಕೆ ತೆರಳಲಿದೆ.ಚಿಕ್ಕಬಾಣವಾರಕ್ಕೆ 7.58ಕ್ಕೆ ಆಗಮಿಸಿ 8 ಗಂಟೆಗೆ ಹೊರಡಲಿದೆ. 8.30ಕ್ಕೆ ಯಶವಂತ ಪುರ ತಲುಪಲಿದೆ.

ಯಶವಂತ ಪುರದಿಂದ ರೈಲು ನಂ. 16575 ಪ್ರತಿ ರವಿವಾರ, ಮಂಗಳವಾರ ಹಾಗೂ ಗುರುವಾರ ಸಂಚರಿಸಲಿದೆ. ಬೆಳಗ್ಗೆ 7.50ಕ್ಕೆ ಹೊರಡಲಿದೆ. ಚಿಕ್ಕ ಬಾಣಾವರಕ್ಕೆ 7.58, ನಾಗಮಂಗಲಕ್ಕೆ 8.11, ಕುಣಿಗಲ್‌ಗೆ 8.55, ಯೆಡಿಯೂರಿಗೆ 9.11, ಬಿ.ಜಿ ನಗರ 9.24ಕ್ಕೆ, ಶ್ರವಣಬೆಳಗೂಳ 9.53ಕ್ಕೆ, ಚೆನ್ನರಾಯಪಟ್ಟಣಕ್ಕೆ 10.01ಕ್ಕೆ, ಹಾಸನ 10.55ಕ್ಕೆ, ಸಕಲೇಶಪುರಕ್ಕೆ ಮಧ್ಯಾಹ್ನ 12 ಗಂಟೆಗೆ, ಸುಬ್ರಹ್ಮಣ ರಸ್ತೆ ನಿಲ್ದಾಣಕ್ಕೆ 2.25, ಕಬಕ ಪುತ್ತೂರಿಗೆ 3.13. ಬಂಟ್ವಾಳ 4.08ಕ್ಕೆ ಹಾಗೂ ಮಂಗಳೂರು ಜಂಕ್ಷನ್‌ಗೆ ಸಂಜೆ 5.30ಕ್ಕೆ ಆಗಮಿಸಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts