ನ್ಯಾಯಾಲಯ ಇಂದಿಗೂ ತನ್ನದೇ ಆದ ಗೌರವವನ್ನು ಉಳಿಸಿಕೊಂಡಿದೆ. ಪೊಲೀಸರು ಬಂಧಿಸಿದ ತಕ್ಷಣ ಯಾವುದೇ ಆರೋಪದ ಪುರಾವೆ ಇಲ್ಲದೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ. ಕೆ.ಎಸ್. ಅಮೀರ್ ಅಹ್ಮದ್ ತುಂಬೆ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈಗಾಗಲೇ ಇಡೀ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಪರಮೇಶ್ವರ ಅವರಿಗೆ ಕಾಂಗ್ರೆಸ್ ನಾಯಕರು ಖುದ್ದಾಗಿ ಮನವರಿಕೆ ಮಾಡಿಕೊಟ್ಟಿದ್ದು, ಸಮಗ್ರ ತನಿಖೆಗೊಳಪಡಿಸಿ ಕಠಿಣ ಕ್ರಮದ ಭರವಸೆ ದೊರೆತಿದೆ. ಈ ಮಧ್ಯೆ ಖುರೇಶಿ ಅವರ ಅನಾರೋಗ್ಯದ ಸಕಲ ಖರ್ಚು-ವೆಚ್ಚಗಳನ್ನು ರಾಜ್ಯ ಸರಕಾರ ಪೊಲೀಸ್ ಇಲಾಖೆಯಿಂದಲೇ ಭರಿಸಬೇಕು ಹಾಗೂ ಕುರೇಶಿ ಕುಟುಂಬಕ್ಕೆ ಪರಿಹಾರವನ್ನೂ ನೀಡಬೇಕು ಎಂದು ಸಿಎಂಗೆ ಒತ್ತಾಯಿಸಲಾಗಿದೆ ಎಂದು ಡಾ. ಅಮೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಪೊಲೀಸ್ ಇಲಾಖಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಇಲಾಖಾ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಕಿಡಿಗೇಡಿ ಕೃತ್ಯಗಳನ್ನೂ ಅಷ್ಟೇ ಕಠಿಣ ಶಬ್ದಗಳಲ್ಲಿ ಖಂಡಿಸುವುದಾಗಿ ಡಾ. ಅಮೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.