ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಹನುಮಜ್ಜಯಂತಿ ಪ್ರಯುಕ್ತ ಬೆಳಗ್ಗೆ 7ರಿಂದ ರಾತ್ರಿ 7ರವರಗೆ ನಿರಂತರ ಬೊಂಡಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಸಾಮರಸ್ಯದ ಪ್ರತೀಕವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಂದಿರದ ಒಳಗೆ ಜಾತಿ ಭೇದ ಇಲ್ಲದೆ ಎಲ್ಲರಿಗೂ ತಾವೇ ಬೊಂಡಾಭಿಷೇಕ ಮಾಡಲು ಇಲ್ಲಿ ಅವಕಾಶವಿದೆ.
ಕಲ್ಲಡ್ಕದ ಶ್ರೀರಾಮ ಮಂದಿರ ಕಳೆದ ವರ್ಷ (2016) ಲೋಕಾರ್ಪಣೆಯಾಗಿತ್ತು. ಡಾ. ಪ್ರಭಾಕರ ಭಟ್ ನೇತೃತ್ವದಲ್ಲಿ ಸಂಘಟಿಸಲಾದ ಸಮಿತಿ ಇದರ ಕಾರ್ಯಭಾರ ನೋಡಿಕೊಳ್ಳುತ್ತಿದೆ. ಈ ಶ್ರೀರಾಮ ಮಂದಿರಕ್ಕೂ ಪೂರ್ವ ಇಲ್ಲಿ ಸುಮಾರು ನೂರೈವತ್ತು ವರ್ಷಗಳ ಇತಿಹಾಸವುಳ್ಳ ಭಜನಾ ಮಂದಿರ ಮೂಲಕ ವಿವಿಧ ಉತ್ಸವ ನಡೆಸಲಾಗುತ್ತಿತ್ತು. ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಹನುಮಜ್ಜಯಂತಿಯನ್ನು ಭಜನೆ ಸಹಿತ ವಿವಿಧ ಧಾರ್ಮಿಕ ಶ್ರದ್ಧೆ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ಏ.11ರಂದು ನಡೆಯುವ ಶ್ರೀ ಹನುಮಜ್ಜಯಂತಿ ಸಂದರ್ಭ ಲೋಕಾರ್ಪಣೆ ನೆನಪಿಗಾಗಿ ಪ್ರಯುಕ್ತ ಸಾಮರಸ್ಯದ ಪ್ರತೀಕವಾಗಿ ಜಾತಿ ಭೇದವಿಲ್ಲದೆ ಎಲ್ಲರಿಗೂ ಬೊಂಡಾಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ 7ರಿಂದ 10ವರೆಗೆ ಭಜನೆ ಕಾರ್ಯಕ್ರಮ ನಡೆಯುವುದು.