ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ಬಿ.ಸಿ.ರೋಡಿನ ರಕ್ತೇಶ್ವರಿ ಗುಡಿ ಸಮೀಪ ಸ್ಚಚ್ಛತೆಗಾಗಿ ಜಾದೂ ಕಾರ್ಯಕ್ರಮ ನಡೆಯಿತು.
ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ನಡೆಸಿಕೊಟ್ಟ ಕಾರ್ಯಕ್ರಮದ ಸಂಯೋಜಕತ್ವವನ್ನು ಟೀಮ್ ವಿವೇಕ್ ವಹಿಸಿಕೊಂಡಿತ್ತು. ಲಯನ್ಸ್ ಕ್ಲಬ್ ನ ಡಾ. ವಸಂತ ಬಾಳಿಗಾ ಹಾಗೂ ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ವಚ್ಛ ಮಂಗಳೂರು ಇದರ ಮುಖ್ಯ ಸಂಯೋಜಕರಾದ ಉಮಾನಾಥ ಕೋಟೆಕಾರ್, ಟೀಮ್ ವಿವೇಕ್ ಸಹಸಂಸ್ಥಾಪಕರಾದ ಅರ್ಜುನ್ ಪೈ, ಟೀಮ್ ವಿವೇಕ್ ಜಿಲ್ಲಾ ಸಂಚಾಲಕರಾದ ಶ್ರೀವತ್ಸ ಹಾಗೂ ಪ್ರಾಜೆಕ್ಟ್ ಜ್ಞಾನ ವಾಹಿನಿ ಇದರ ಸಂಚಾಲಕರಾದ ಲಕ್ಶ್ಮೀಶ ಮಯ್ಯ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…