4ರಿಂದ 11ವರೆಗೆ ಅಖಂಡ ಭಗವನ್ನಾಮಸಂಕೀರ್ತನೆ ನಡೆಯುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮಗಳ ವಿವರ ಹೀಗಿದೆ.
4ರಂದು ಅಖಂಡ ಭಗವನ್ನಾಮಸಂಕೀರ್ತನೆ ಆರಂಭ. 8ರಂದು ರಾತ್ರಿ ವಿಶೇಷ ಬೆಳ್ಳಿರಥೋತ್ಸವ. 11ರಂದು ಬೆಳಗ್ಗೆ ಶ್ರೀಮದ್ರಾಮಾಯಣ ಮಹಾಯಜ್ಞ. ಬೆಳಗ್ಗೆ 10.30ರಿಂದ ಧರ್ಮಸಭೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯುವ ಧರ್ಮಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಕುಡ್ಪಲ್ತಡ್ಕ ಶ್ರೀ ಭಾರತೀ ಸೇವಾ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್, ಮುಂಬೈ ವಿಶ್ವಾತ್ ಕೆಮಿಕಲ್ಸ್ ಅಧ್ಯಕ್ಷ ವಿವೇಕ್ ಶೆಟ್ಟಿ, ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ರಾಮಮೋಹನ ರೈ, ಪುತ್ತೂರು ಬಿಲ್ಲವ ಸಂಘ ಅಧ್ಯಕ್ಷ ಜಯಂತ ನಡುಬೈಲು, ಬೆಂಗಳೂರು ನೆಟ್ ವರ್ತ್ ಸಿಸ್ಟಮ್ ಸಿಇಒ ಭವಾನಿ ಶಂಕರ ಶೆಟ್ಟಿ, ಮಣಿಪಾಲ ಶಾಂಭವಿ ಬಿಲ್ಡರ್ಸ್ ನ ದಿನೇಶ್ ಶೆಟ್ಟಿ ಹೆರ್ಗ ಭಾಗವಹಿಸುವವರು. 12 ಗಂಟೆಗೆ ಮಹಾಯಜ್ಞ ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 3ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 7.30ರಿಂದ ಬೆಳ್ಳಿರಥೋತ್ಸವ, ಶ್ರೀ ಹನುಮದ್ರ್ವತ ಪೂಜೆ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.