ಅಮ್ಟೂರು ಶ್ರೀಕೃಷ್ಣ ಮಂದಿರ ಮತ್ತು ಗ್ರಾಮವಿಕಾಸ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರ, ಭಾರತ ಸ್ವಾಭಿಮಾನ ಟ್ರಸ್ಟ್ ಹರಿದ್ವಾರ, ದ.ಕ.ಜಿಲ್ಲಾ ಪತಂಜಲಿ ಯೋಗ ಸಮಿತಿ ನೇತೃತ್ವ ಜೊತೆ 21 ದಿನಗಳ ಯೋಗ ಶಿಬಿರ ಸಭಾಂಗಣದಲ್ಲಿ ನಡೆಯಿತು.
ಬೆಳಗ್ಗೆ 5ರಿಂದ 7 ಗಂಟೆವರೆಗೆ ನಡೆದ ಶಿಬಿರದಲ್ಲಿ ಯೋಗ ಶಿಕ್ಷಕರಾಗಿ ಡಾ.ಜ್ಞಾನೇಶ್ವರ ನಾಯಕ್, ಪ್ರದೀಪ್ ಮುಡಿಪು, ಜಗದೀಶ ಮುಡಿಪು, ಪ್ರಭಾಕರ ಬೋಳ್ಯಾರ್, ಹಾಗೂ ಸರಸ್ವತಿ ಮಾತಾಜಿ ನೆಟ್ಲ ಸಹಕರಿಸಿದರು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಮಾತನಾಡಿ, ಯೋಗದಿಂದ ನಮ್ಮ ಆರೋಗ್ಯಕ್ಕೆ, ಮತ್ತು ಶರೀರಕ್ಕೆ ಹಲವು ಲಾಭಗಳಿವೆ. ಇದು ಕೇವಲ ನಮಗೆ ಮಾತ್ರ ಸೀಮಿತವಾಗಿರಬಾರದು ನಮ್ಮ ಸಮಾಜದಲ್ಲಿರುವ ಇನ್ನಿತರರಿಗೂ ಇದರ ಪ್ರಯೋಜನವಾಗಬೇಕು. ನಾವು ಕಲಿತದುದನ್ನು ಇತರರಿಗೂ ತಿಳಿಸಿಕೊಡಬೇಕು ಎಂದರು.
ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಯೋಗದಿಂದ ಆದ ಬದಲಾವಣೆಯನ್ನು ಹಂಚಿಕೊಂಡರು. ಎಲ್ಲರಿಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು. ಸಮಿತಿಯ ವತಿಯಿಂದ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನ್ಯಾಯವಾದಿ ಸತೀಶ್ ಭಟ್ ಶಿವಗಿರಿ ಸ್ವಾಗತಿಸಿ, ಕುಶಾಲಪ್ಪ ಅಮ್ಟೂರು ಕಾರ್‍ಯಕ್ರಮವನ್ನು ನಿರೂಪಿಸಿ, ವಂದಿಸಿದರು.