ಬಂಟ್ವಾಳ

ಹಳ್ಳಿಗೊಬ್ಬ ಪೊಲೀಸ್ ವ್ಯವಸ್ಥೆಗೆ ಚಾಲನೆ ನೀಡಿದ ಎಸ್ಪಿ ಬೊರಸೆ

ರಾಜ್ಯ ಪೊಲೀಸ್ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆ ಶನಿವಾರ ದ.ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯಲ್ಲಿರುವ ರೋಟರಿ ಬಾಲಭವನದಲ್ಲಿ ಜಾರಿಗೊಂಡಿತು.


ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಭೂಷಣ್ ಜಿ. ಬೊರಸೆ ಶನಿವಾರ ರಾತ್ರಿ ಯೋಜನೆಗೆ ಚಾಲನೆ ನೀಡಿ, ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಓರ್ವ ಪೊಲೀಸ್ ಕಾನ್ಸ್ ಟೇಬಲ್ ಮುಖ್ಯಸ್ಥರಾಗಿರುವ 50 ಮಂದಿಯ ತಂಡವನ್ನು ರಚಿಸಲಾಗುವುದು. ಇದರಲ್ಲಿ ಶೇ.30 ಮಹಿಳೆಯರು ಇರುತ್ತಾರೆ. ತಿಂಗಳ ಮೊದಲ ಮತ್ತು ಮಊರನೇ ವಾರ ಆಗಮಿಸಿ, ಅಲ್ಲೇ ವಾಸ್ತವ್ಯ ಹೂಡುವ ಪೊಲೀಸ್ ಸಿಬ್ಬಂದಿ ಅಹವಾಲು ಆಲಿಸುತ್ತಾರೆ ಹಾಗೂ ತಮ್ಮ ಗಮನಕ್ಕೆ ತರಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟು 263  ಹಳ್ಳಿಗೊಬ್ಬ ಪೊಲೀಸ್ ಬೀಟ್ ವ್ಯವಸ್ಥೆಯನ್ನು ರಚಿಸಲಾಗಿದೆ. ಶನಿವಾರದಿಂದಲೇ ಈ ವ್ಯವಸ್ಥೆ ದ.ಕ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಗ್ರಾಮಕ್ಕೆ ನಿಯುಕ್ತರಾಗಿರುವ ಬೀಟ್ ಪೊಲೀಸ್ ಆ ಗ್ರಾಮದ ಎಸ್ಸೈ ಆಗಿರುತ್ತಾರೆ. ಅವರು ತಾನು ಕೈಗೊಂಡ ಕ್ರಮದ ಬಗ್ಗೆ ಠಾಣಾಕಾರಿಯವರಿಗೆ ವರದಿ ಒಪ್ಪಿಸುತ್ತಾರೆ. ಬಳಿಕ ತಾನೆ ಖುದ್ದಾಗಿ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ ಎಂದರು.

ಜಾಹೀರಾತು

ಪೊಲೀಸರೊಂದಿಗೆ ಸಂಪರ್ಕಿಸಲು ವಾಟ್ಸಾಪ್ ಗುಂಪು ಮೂಲಕ ಸುಲಭಸಾಧ್ಯ ಎಂದು ಪತ್ರಕರ್ತ ಫಾರೂಕ್ ಗೂಡಿನಬಳಿ ಸಲಹೆ ನೀಡಿದರು.

ಹೆದ್ದಾರಿ ಇಲಾಖೆ ರಸ್ತೆ ಅಗಲೀಕರಣ ನೆಪದಲ್ಲಿ ಬಿ.ಸಿ.ರೋಡಿನ ಕೈಕಂಬದಲ್ಲಿ ಅಗೆದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದು ಅದನ್ನೀಗ ಮುಚ್ಚಲಾಗಿದೆಯಾದರೂ ಮಳೆ ಗಾಳದಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ವರ್ತಕರು ತೊಂದರೆ ಅನುಭವಿಸುವಂತಾಗಿದೆ ಎಂದು ಪಿ.ಎ.ರಹೀಂ ಗಮನ ಸೆಳೆದಾಗ ಈ ಬಗ್ಗೆ ಕ್ರಮಕ್ಕೆ ಹೆದ್ದಾರಿ ಇಲಾಖೆಗೆ ಪತ್ರ ಬರೆಯುವುದಾಗಿ ಎಸ್ಪಿ ಭರವಸೆ ನೀಡಿದರು.
ಯಾವುದೇ ಅಪರಾಧ ಅಥವಾ ಇತರ ಪ್ರಕರಣಗಳು ನಡೆದಾಗ ಬೀಟ್ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಪಾಸ್‌ಪೋರ್ಟ್ ಪರಿಶೀಲನೆಯ ಸಂದರ್ಭದಲ್ಲಿ ಅರ್ಜಿದಾರರಿಗೆ ಆಗುವ ತೊಂದರೆಗಳನ್ನು ನಿವಾರಿಸಲಾಗಿದೆ. ಸಕಾಲದ ಮೂಲಕ 21 ದಿನದೊಳಗಾಗಿ ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಸಿ ಸಂಬಂಸಿದವರಿಗೆ ಕಳುಹಿಸಿ ಕೊಡಲಾಗುವುದು. ಪ್ರಸ್ತುತ ತನ್ನ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಸಂಬಂಸಿ ಯಾವುದೇ ಅರ್ಜಿಗಳಿಲ್ಲ. ಎಲ್ಲ ಅರ್ಜಿಗಳನ್ನು ಸಕಾಲದಲ್ಲಿ ವಿಲೇ ಮಾಡಲಾಗಿದೆ ಎಂದರು. ಪಾಸ್ ಪೋಟ್ ವೆರಿಫಿಕೇಶನ್ ಸಂದರ್ಭ ಇಡೀ ದಿನ ತನ್ನ ತಂದೆ, ತಾಯಿ ಸ್ಟೇಶನ್ ನಲ್ಲೇ ಕುಳಿತಿದ್ದ ಪ್ರಸಂಗ ನೆನಪಿಸಿದ ಎಸ್ಪಿ, ಯಾವುದೇ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್ ಮಾತನಾಡಿ, ಬೀಟ್ ವ್ಯವಸ್ಥೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸದಸ್ಯ ಮುನೀಶ್ ಆಲಿ ಮಾತನಾಡಿ, ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಡಿವೈಎಸ್ಪಿ ರವೀಶ್ ಸಿ.ಆರ್., ಬಿಮೂಡ ೩ ವ್ಯಾಪ್ತಿಯ ಬೀಟ್ ಪೊಲೀಸ್ ಎನ್.ಜಿ.ಬಸಪ್ಪ ವೇದಿಕೆಯಲ್ಲಿದ್ದರು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಇಕ್ಬಾಲ್ ಗೂಡಿನ ಬಳಿ, ಮುನೀಶ್ ಆಲಿ, ಸಾಮಾಜಿಕ ಮುಖಂಡ ಪಿ.ಎ.ರಹೀಂ, ಸತ್ತಾರ್ ಗೂಡಿನಬಳಿ ಮೊದಲಾದವರು ಉಪಸ್ಥಿತರಿದ್ದರು. ನಗರ ಠಾಣೆ ಎಸ್ಸೈ ರಕ್ಷಿತ್ ಸ್ವಾಗತಿಸಿ ವಂದಿಸಿದರು. ಎಎಸ್ಸೈ ರಘುರಾಮ ಹೆಗ್ಡೆ ಸಹಿತ ಸಿಬ್ಬಂದಿ ಸಹಕರಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts