ಭಜನೆ ಮನುಷ್ಯನಲ್ಲಿ ಸಾತ್ವಿಕ ಭಾವ ಬೆಳೆಸಿ ಸಂಸ್ಕಾರ ಕಲಿಸುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಭೈರಿಕಟ್ಟೆಯಲ್ಲಿರುವ ಶ್ರೀ ಅಶ್ವತ್ಥ ನಾರಾಯಣ ಭಜನಾ ಮಂದಿರ ಸಮಿತಿಯ 16ನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
ಸಾಮೂಹಿಕ ಶನೈಚ್ಹರ ಪೂಜೆ ಶ್ರೀ ಅಶ್ವತ್ಥ ನಾರಾಯಣ ಭಜನಾ ಮಂದಿರ , ಬೈರಿಕಟೆ ಯಲ್ಲಿ ಅರ್ಧ ಏಕಾಹ ಭಜನೆ, ಗಣಪತಿ ಹವನ, ಶ್ರೀ ಅಶ್ವತ್ಥ ನಾರಾಯಣ ಪೂಜೆ, ಶನಿಪೂಜೆ ಹಾಗು ಧಾರ್ಮಿಕ ಸಭೆ-ಬಡ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತು ಸಾಂಸ್ಕ್ರುತಿಕ ಕಾರ್ಯಕ್ರಮ ದೊಂದಿಗೆ ನಡೆಯಿತು.
ಎಸ್.ಈಶ್ವರ ಭಟ್-ಕಾರ್ಯದರ್ಶಿ, ಭಾರತ ಸೇವಾಶ್ರಮ ಕನ್ಯಾನ ಇವರು ಸಭೆಯ ಅದ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕೆ ಬಾಲಕೃಷ್ಣ ರಾವ್, ಪ್ರಾಂಶುಪಾಲರು, ಬೆಟ್ಟಂಪಾಡಿ ಸರಕಾರಿ ಕಾಲೇಜು, ಡಾ. ಜೆ.ಮನೋರಮ ಜಿ.ಭಟ್., ಕೆ.ಶ್ರಿಧರ್-ಕನ್ನಡ ಉಪನ್ಯಾಸಕರು,ಅಳಿಕೆ ಹಾಗೂ ಕೆ.ಈಶ್ವರ ಭಟ್, ಪದ್ಮನಾಭ ಪೂಜಾರಿ, ಶ್ಯಾಮಸುಂದರಿ ಜಿ.ಭಟ್-ನಾದಮಯಿ ,ಮಡಿಯಾಲ, ನೀಲಪ್ಪ ಗ್‌ಡ, ಮತ್ತು ಸದಾಶಿವ ಶೆಟ್ಟಿ ಮಡಿಯಾಲ ಉಪಸ್ಥಿತರಿದ್ದರು.