ಧಾರವಾಡದ ಹುರಕಡ್ಲಿ ಕಾನೂನು ಮಹಾವಿದ್ಯಾಲಯದಲ್ಲಿ “ಉಚಿತ ಅಂತರ್ಜಾಲ ಪೂರೈಕೆ ಯುವ ಜನತೆಗೆ ಹಾನಿಕಾರಕವೇ” ಎಂಬ ವಿಷಯದಲ್ಲಿ ನಡೆದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಗಝಾಲಿ ಕೆ.ಬಿ.ಎಸ್. ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರು ಬಂಟ್ವಾಳ ಮೂಲದ ಸುಲೈಮಾನ್ ಕೆ.ಬಿ. ಮತ್ತು ಅವ್ವಮ್ಮ ದಂಪತಿಯ ಪುತ್ರ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)