ಬಂಟ್ವಾಳ

ಎಟಿಎಂನಲ್ಲಿ ಬರುತ್ತದೆ ಸ್ಟಿಕ್ಕರ್ ಅಂಟಿಸಿದ ನೋಟು

ಹುಷಾರು…!

ಎಟಿಎಂನಲ್ಲೂ ಸಿಗುತ್ತದೆ ಎರಡು ಸಾವಿರ ರೂ ಮುಖಬೆಲೆಯ ಸ್ಟಿಕ್ಕರ್ ಅಂಟಿಸಿದ ನೋಟು.

ಈ ವಿಷಯವನ್ನು bantwalnews.com ಗಮನ ಸೆಳೆದವರು ಓದುಗ  ಆಶಿಕ್ ಕುಕ್ಕಾಜೆ. ಅವರು ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಟಿಎಂಗೆ ಹೋಗಿ ಎರಡು ಸಾವಿರ ರೂ ಮುಖಬೆಲೆಯ ನೋಟನ್ನು ಪಡೆದಾಗ ಅದರಲ್ಲಿ ಸ್ಟಿಕ್ಕರ್ ಅಂಟಿಸಿರುವುದು ಗಮನಕ್ಕೆ ಬಂತು ಕೂಡಲೇ ಅದನ್ನು ಬ್ಯಾಂಕಿಗೆ ಒಪ್ಪಿಸಿ ಬೇರೆ ನೋಟು ಪಡೆದರು. ಬ್ಯಾಂಕುಗಳ ನೋಟು ಪಡೆಯುವ ಯಂತ್ರಗಳು ಇಂಥ ನೋಟುಗಳನ್ನು ಸ್ವೀಕರಿಸುತ್ತವೆ ಹಾಗೂ ಎಟಿಎಂಗಳಲ್ಲಿ ಇಂಥ ನೋಟುಗಳು ದೊರಕುತ್ತವೆ ಎನ್ನುವುದೇ ಗ್ರಾಹಕನಿಗೆ ತಲೆನೋವಾದ ಸಂಗತಿ. ಎಟಿಎಂಗಳಲ್ಲೇ ಬರುವ ನೋಟುಗಳು ಸ್ಟಿಕ್ಕರ್ ಅಂಟಿಸಿಯೋ ಅಥವಾ ಪೆನ್, ಪೆನ್ಸಿಲ್ ನಲ್ಲಿ ಗೀಚಿದ ಅಕ್ಷರಗಳಿರುವ ನೋಟುಗಳು ಇರಬಾರದು, ಇವುಗಳು ಬಾರದಂತೆ ಹಾಗೂ ಗ್ರಾಹಕರು ಪರದಾಟ ನಡೆಸದಂತೆ ಬ್ಯಾಂಕುಗಳ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಶಿಕ್ ಕುಕ್ಕಾಜೆ ಒತ್ತಾಯಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts