Internet pic
www.bantwalnews.com report
ಸಾಂದರ್ಭಿಕ ಚಿತ್ರ
ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮ ಕಂಬಳಬೆಟ್ಟು ಎಂಬಲ್ಲಿ ಸಿಡಿಮದ್ದು ಗರ್ನಲ್ ತಯಾರಿಸುವ ವೇಳೆ ಆಕಸ್ಮಿವಾಗಿ ಸ್ಫೋಟ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದಾರೆ.
ಸೋಮವಾರ ಇಳಿಸಂಜೆಯ ಹೊತ್ತಿಗೆ ಘಟನೆ ನಡೆದಿದ್ದು, ಮೃತಪಟ್ಟವರು ಸ್ಥಳೀಯ ನಿವಾಸಿಗಳಾದ ಸುಂದರ ಪೂಜಾರಿ (39) ಮತ್ತು ಹಾಶೀಮ್ (25) ಎಂದು ಗುರುತಿಸಲಾಗಿದೆ. ಸ್ಫೋಟ ಗಫೂರ್ (ಗರ್ನಲ್ ಸಾಹೇಬರು )ಎಂಬವರ ಮನೆಯಲ್ಲಿ ನಡೆದಿದ್ದು, ಅಲ್ಲೇ ಸಿಡಿಮದ್ದು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.
ಘಟನೆಯಿಂದಾಗಿ ಸಮೀಪದ ಮನೆಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.