ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿಯಲ್ಲಿ 2011-12ನೇ ಸಾಲಿನ ಜಿಲ್ಲಾ ಮಟ್ಟದ ಸ್ವಚ್ಛ ಶಾಲೆ ಪ್ರಶಸ್ತಿ ಪಡೆದ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಇರಾದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯ ಮೊತ್ತ 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೈ ತೊಳೆಯುವ ಘಟಕವನ್ನು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಉದ್ಘಾಟಿಸಿದರು.
ಈ ಸಂದರ್ಭ ಜಗನ್ನಾಥ ಪಕ್ಕಳ ಇರಾ ತಾಳಿತ್ತಬೆಟ್ಟು ಶಾಲೆಗೆ ತಮ್ಮ ತಂದೆ ತಾಯಿಯವರ ನೆನಪಿನಲ್ಲಿ ನೀಡಿದ ಇಂಟರ್‌ಲಾಕ್ ಅಳವಡಿಕೆಯನ್ನು ಉದ್ಘಾಟಿಸಲಾಯಿತು. ಸ್ವಚ್ಛ ಭಾರತ್ ಮಿಷನ್‌ನ ನೋಡೆಲ್ ಅಧಿಕಾರಿ ನವೀನ್, ಇರಾಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಾವತಿ ಎ.ಕರ್ಕೇರ, ಪಂಚಾಯತ್ ಪ್ರಭಾರ ಅಭಿವೃಧ್ದಿ ಅಧಿಕಾರಿ ನಳಿನಿ ಪ್ರಶಸ್ತಿ ಪಡೆಯಲು ಪರಿಶ್ರಮಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಳಿಧರ್ , ನಿವೃತ್ತ ಮುಖ್ಯೋಪಾಧ್ಯಾಯಿನಿ ಕೃಷ್ಣಮ್ಮ ದಾನಿಗಳಾದ ವಾಮನ ಪೂಜಾರಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು,ಪೋಷಕರು ಮಕ್ಕಳು ಉಪಸ್ಥಿತರಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೈತೊಳೆಯುವ ಘಟಕಕ್ಕೆ ಟೈಲ್ಸ್ ಅಳವಡಿಸಲು ನೆರವಾದ ವಾಮನ ಪೂಜಾರಿ ಇರಾ ಹಾಗೂ ಇಂಟರ್ ಲಾಕ್ ಅಳವಡಿಕೆಗೆ ನೆರವಾದ ಜಗನ್ನಾಥ ಪಕ್ಕಳರನ್ನು ಇರಾ ಶಾಲಾ ಪರವಾಗಿ ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಳಿಧರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಮತಿ ಶಶಿ.ಬಿ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್ ಪ್ರಾಸ್ತಾವಿಕ ಮಾತನಾಡಿದರು.
ಸಹ ಶಿಕ್ಷಕಿ ಮಿನೋರ ರೋಸಿ ವಂದಿಸಿದರು. ಸಹ ಶಿಕ್ಷಕ ಜೋನ್ ಫೆರ್ನಾಂಡಿಸ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿ ಪದವೀಧರ ಶಿಕ್ಷಕಿ ಸೌಮ್ಯ ಹೆಚ್ ಕಾರ್ಯಕ್ರಮ ನಿರೂಪಿಸಿದರು.