ಮೇಲ್ಕಾರಿನ ಯುವ ಸಂಗಮ ವತಿಯಿಂದ ಪದಾಧಿಕಾರಿಯಾಗಿದ್ದ ಕಲ್ಲಡ್ಕ ಕರಿಂಗಾಣದ ಸೋಮಶೇಖರ್ ಅವರ ಶ್ರದ್ಧಾಂಜಲಿ ಸಭೆ ಮೇಲ್ಕಾರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭ ಯುವ ಸಂಗಮದ ಅಧ್ಯಕ್ಷರಾದ ವಿಠ್ಠಲ ಶೆಣೈ, ಗೌರವಾಧ್ಯಕ್ಷರಾದ ಯಂ.ಯನ್.ಕುಮಾರ್, ಕೃಷ್ಣ ನಾಕ್, ಕಾರ್ಯದರ್ಶಿ ಲೋಕೇಶ್, ಕೋಶಾಧಿಕಾರಿ ಅಶೋಕ ಎಸ್. ಮೆಲ್ಕಾರ್, ಪದಾಧಿಕಾರಿಗಳು, ಸರ್ವಸದಸ್ಯರು ಭಾಗವಹಿಸಿದ್ದರು.
ಹೃದಯಾಘಾತದಿಂದ ನಿಧನ ಹೊಂದಿದ್ದ ಸೋಮಶೇಖರ್, ಅವಿವಾಹಿತರಾಗಿದ್ದರು. ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು ಎಂದು ಸಭೆಯಲ್ಲಿದ್ದವರು ಸ್ಮರಿಸಿಕೊಂಡರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)