ಧರ್ಮ, ಮತ, ಜಾತಿ, ಪಂಗಡ, ವರ್ಣ, ವರ್ಗ, ಭಾಷೆಗಳನ್ನು ಮುಂದಿಟ್ಟುಕೊಂಡು ಪರಸ್ಪರ ಹಗೆ ಸಾಸುವ ಅಪಾಯಕಾರಿ ಸನ್ನಿವೇಶ, ಆತಂಕಕಾರಿ ಪರಿಸ್ಥಿತಿಯನ್ನು ಬದಲಾಯಿಸಿ, ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸಲು ’ಮಾನವರು ಸಹೋದರರು’ ಎಂಬ ಧ್ಯೇಯವಾಕ್ಯದೊಂದಿಗೆ ೨೦೧೮ರ ಜನವರಿ ೧ರ ವರೆಗೆ ಸೌಹಾರ್ದ ಅಭಿಯಾನ ನಡೆಸಲಾಗುವುದು ಎಂದು ಕೆ.ಎ.ಅಬ್ದುಲ್‌ಅಜೀಜ್ ಪುಣಚ ತಿಳಿಸಿದರು.
ಅವರು ಮಂಗಳವಾರ ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಅಭಿಯಾನಕ್ಕೆ ನಾನಾ ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಕೈಜೋಡಿಸಬೇಕು. ಜತೆಗೆ ಸಂತರು, ಧಾರ್ಮಿಕ, ಸಾಮಾಜಿಕ ಮುಖಂಡರು, ಲೇಖಕರು, ಪತ್ರಕರ್ತರು, ಜನತೆಗೆ ಈ ಶಾಂತಿಯ ಸಂದೇಶವನ್ನು ತಲುಪಿಸಬೇಕು. ರಾಜಕೀಯ ಪಕ್ಷಗಳು, ಪೊಲೀಸರು, ಸರಕಾರಿ ಇಲಾಖೆಗಳೂ ಇದಕ್ಕೆ ಸಹಕರಿಸಬೇಕು. ಕರಪತ್ರ ಮುದ್ರಿಸಿ, ವಿತರಿಸಿ ಈ ಬಗ್ಗೆ ಪ್ರಚಾರ ಕೈಗೊಳ್ಳುವುದರ ಜತೆಗೆ ವೈಯಕ್ತಿಕ ಭೇಟಿಯೊಂದಿಗೆ ಪ್ರತಿಯೊಬ್ಬರನ್ನೂ ತಲುಪಬೇಕೆಂಬ ಆಶಯವಿದೆ. ಸೌಹಾರ್ದಮಯ ವಾತಾವರಣವನ್ನು ನಿರ್ಮಿಸಲು ವಾಟ್ಸಾಪ್ ಗ್ರೂಪನ್ನು ತೆರೆಯಲಾಗಿದೆ. ಅದರಲ್ಲಿ ಇನ್ನಷ್ಟು ಮಂದಿಯನ್ನು ತಲುಪಿ, ಮಾನವರು ಸಹೋದರರು ಎಂಬ ಸಂದೇಶವನ್ನು ತಲುಪಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎ.ಅಬೂಬಕ್ಕರ್ ಅನಿಲಕಟ್ಟೆ, ಮುನ್ನಾ ಕೆ.ಎಸ್.ಬಿ., ಹನೀಫ್ ಎಂ.ಎ. ಅವರು ಉಪಸ್ಥಿತರಿದ್ದರು.
,,,,,,,,,