ಸರಪಾಡಿ ಗ್ರಾಮ ವ್ಯಾಪ್ತಿಯ ಪೆರಿಯಪಾದೆ-ಬೀಯಪಾದೆ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ವತಿಯಿಂದ 40 ಲಕ್ಷ ವೆಚ್ಚದ ಕಾಂಕ್ರಿಟೀಕರಣದ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.
ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಎಂ.ಆರ್.ಪಿ.ಎಲ್. ನ ಡಿ.ಜಿ.ಎಂ. ಹರೀಶ್ ಬಾಳಿಗಾ, ಕಣಚೂರ್ ನ ಯು.ಕೆ.ಮೋನು, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್ ಗೋಪಾಲ್, ವಲಯಾಧ್ಯಕ್ಷ ಡಿಚಾರ್ಡ್ ಡಿಸೋಜ, ಪ್ರಮುಖರಾದ ಪದ್ಮಪ್ಪ ಪೂಜಾರಿ ಹೆಗ್ಗಡೆಕೋಡಿ, ಲೋಕೇಶ್ ಪೂಜಾರಿ ಹೆಕ್ಕುಡೇಲು, ಲಿಯೋ ಫೆರ್ನಾಂಡಿಸ್, ವಿಶ್ವನಾಥ ಸಾಲ್ಯಾನ್ ಪಕ್ಕೆರೊಟ್ಟು, ಗಿರೀಶ್ ಪಟ್ಲದಡ್ಡ, ನಾರಾಯಣ ಶೆಟ್ಟಿ ಹೊಳ್ಳರಗುತ್ತು, ರಾಜೇಂದ್ರ ಜೈನ್ ಪೆರ್ಲಗುತ್ತು ಉಪಸ್ಥಿತಿರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…