ಪಾಕಶಾಲೆಯೇ ವೈದ್ಯಶಾಲೆ

ದಿನಾ ಏಲಕ್ಕಿ ಜಗಿದರೆ ಹಾರ್ಟಿಗೆ ಒಳ್ಳೇದು

 

ಡಾ.ಎ.ಜಿ.ರವಿಶಂಕರ್

ಅಂಕಣ: ಪಾಕಶಾಲೆಯೇ ವೈದ್ಯಶಾಲೆ

www.bantwalnews.com

ಏಲಕ್ಕಿ ಬೀಜ ಒಂದು ರುಚಿಕರವಾದ  ಸುಗಂಧ ಖಾದ್ಯ ದ್ರವ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ.ಸಾಧಾರಣವಾಗಿ ಹೆಚ್ಚಿನ ಭಕ್ಷ್ಯ ,ಪಾಯಸಗಳು ಏಲಕ್ಕಿ ಹಾಕದಿದ್ದರೆ ಪರಿಪೂರ್ಣವಾಗುವುದಿಲ್ಲ. ಹೇಗೆ ಏಲಕ್ಕಿಯು ಪಾಕಶಾಸ್ತ್ರದಲ್ಲಿ, ಅಷ್ಟೇ ಪ್ರಾಮುಖ್ಯತೆಯನ್ನು ವೈದ್ಯಕೀಯ ಕ್ಷೇತ್ರದಲ್ಲೂ ಪಡೆದಿದೆ. ಇದು ಶರೀರದ ವಾತ, ಪಿತ್ತ ಹಾಗು ಕಪ ದೋಷಗಳನ್ನು ಸಮತೋಲನದಲ್ಲಿಡುತ್ತದೆ.

  1. ಏಲಕ್ಕಿಗೆ ಕಪವನ್ನು ಕರಗಿಸುವ ಸಾಮರ್ಥ್ಯವಿದ್ದು ಕೆಮ್ಮು ಹಾಗು ದಮ್ಮು ರೋಗಗಳಲ್ಲಿ ಬಹು ಪ್ರಯೋಜನಕಾರಿಯಾಗಿದೆ.
  2. ಇದು ಹೃದಯಕ್ಕೆ ಬಲದಾಯಕವಾಗಿದ್ದು ಹ್ರದ್ರೋಗಿಗಳು ದಿನಾ ಏಲಕ್ಕಿ ಬೀಜವನ್ನು ಜಗಿಯುವುದರಿಂದ ಹೃದಯದ ಶಕ್ತಿ ಹೆಚ್ಚಾಗುತ್ತದೆ.
  3. ಮೂತ್ರ ಪ್ರವೃತ್ತಿ ಸರಿಯಾಗಿ ಆಗದಿದ್ದರೆ ಏಲಕ್ಕಿ ಹಾಕಿ ಕುದಿಸಿದ ನೀರನ್ನು ಕುಡಿಯಬೇಕು. ಮೂತ್ರಕೋಶದ ಕಲ್ಲಿನಲ್ಲೂ ಸಹ ಏಲಕ್ಕಿ ನೀರು ಉತ್ತಮ ಪಲಿತಾಂಶವನ್ನು ನೀಡುತ್ತದೆ.
  4. ಏಲಕ್ಕಿಯು ಶೀತ ವೀರ್ಯವಾಗಿದ್ದು ,ಶರೀರದಲ್ಲಿ ಉರಿ ಕಾಣಿಸಿಕೊಂಡಾಗ ಇದರ ಕಷಾಯ ಮಾಡಿ ಕುಡಿಯಬೇಕು.
  5. ಏಲಕ್ಕಿಯು ವಾಕರಿಕೆ ಹಾಗು ವಾಂತಿಯನ್ನು ಕಡಿಮೆ ಮಾಡುತ್ತದೆ. ದೂರ ಪ್ರಯಾಣಿಸುವಾಗ ಈ ಸಮಸ್ಯೆಗಳಿದ್ದರೆ ಏಲಕ್ಕಿ ಬೀಜವನ್ನು ಬಾಯಲ್ಲಿ ಜಗಿಯಬೇಕು.
  6. ಏಲಕ್ಕಿ ಬೀಜವನ್ನು ಜಗಿಯುವುದರಿಂದ ಬಿಕ್ಕಳಿಕೆ ಸಮಸ್ಯೆಯು ನಿವಾರಣೆಯಾಗುತ್ತದೆ.
  7. ಏಲಕ್ಕಿ ಬೀಜವನ್ನು ಜಗಿಯುವುದರಿಂದ ಬಾಯಿಯ ರುಚಿಯು ಸರಿಯಾಗುತ್ತದೆ ಮತ್ತು ನಮ್ಮ ಜೀರ್ಣ ಶಕ್ತಿಯು ವೃದ್ಧಿಯಾಗುತ್ತದೆ.
  8. ಏಲಕ್ಕಿ ಕಷಾಯವನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರಿಸುವಿಕೆ,ಹೊಟ್ಟೆನೋವು ಹಾಗು ಹುಳದ ಬಾಧೆ ನಿವಾರಣೆಯಾಗುತ್ತದೆ.
  9. ಗಂಟಲು ನೋವು ಮತ್ತು ಗಂಟಲಲ್ಲಿ ಸ್ವರ ಬಿದ್ದು ಹೋದಾಗ ಏಲಕ್ಕಿ ಕಷಾಯಕ್ಕೆ ಸ್ವಲ್ಪ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು
  10. ಏಲಕ್ಕಿ ಬೀಜವನ್ನು ಜಗಿಯುವುದರಿಂದ ಬಾಯಿ ಹುಣ್ಣು, ಬಾಯಿಯ ದುರ್ಗಂಧ ಹಾಗು ಬಾಯಿಯೋಳಗಿನ ಕಪದ ಲೇಪ ನಿವಾರಣೆಯಾಗುತ್ತದೆ.
  11. ಅತಿಯಾದ ಬಾಯಾರಿಕೆಯಾದಾಗ 2 ಅಥವಾ 3 ಏಲಕ್ಕಿ ಬೀಜವನ್ನು ಜಗಿಯಬೇಕು ಅಥವಾ ಏಲಕ್ಕಿ ಹಾಕಿ ಶರಬತ್ತು ಮಾಡಿ ಕುಡಿದರೂ ಆದೀತು.
  12. ಭೇದಿಯ ಸಮಸ್ಯೆಯಿದ್ದಾಗ ಏಲಕ್ಕಿಯನ್ನು ಬಾಯಲ್ಲಿ ಜಗಿದು ಅದರ ರಸವನ್ನು ನುಂಗಬೇಕು.
  13. ನಿತ್ಯ ಏಲಕ್ಕಿಯನ್ನು ಸೂಕ್ತ ಪ್ರಮಾಣದಲ್ಲಿ ತಿನ್ನುವುದರಿಂದ ಮೂಲವ್ಯಾಧಿ ವಾಸಿಯಾಗುತ್ತದೆ.
  14. ನಿತ್ಯ ಸ್ವಲ್ಪ ಪ್ರಮಾಣದ ಏಲಕ್ಕಿಯ ಸೇವನೆಯಿಂದ ಮಾನಸಿಕ ಖಿನ್ನತೆ ಕಡಿಮೆಯಾಗುತ್ತದೆ.

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.