ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ಖ.ಸಿ) ಅವರ ಹೆಸರಿನಲ್ಲಿ ಅಜಿಲಮೊಗರು ಮಸೀದಿಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಮಾಲಿದಾ ಉರೂಸ್ ೭೪೪ನೇ ವಾರ್ಷಿಕ ಕಾರ್ಯಕ್ರಮ ಮಾ ೧೩ ರಂದು ಸಮಾರೋಪಗೊಂಡಿತು.
ಮಾರ್ಚ್ ೧೧ ರಂದು ಭಂಡಾರದ ಹರಕೆಯಿಂದ ಪ್ರಾರಂಭಗೊಂಡ ಕಾರ್ಯಕ್ರಮ ಮಾರ್ಚ್ ೧೨ ರಂದು ಮಾಲಿಕಾ ಹರಕೆ ಹಾಗೂ ಮಾ ೧೩ ರಂದು ಕಂದೂರಿ ಅನ್ನದಾನ ಕಾರ್ಯಕ್ರಮದ ಮೂಲಕ ಸಮಾಪ್ತಿಗೊಂಡಿತು. ಕಾರ್ಯಕ್ರಮದಲ್ಲಿ ಸಯ್ಯಿದ್ ಕೆ.ಎಸ್. ಮುಖ್ತಾರ್ ತಂಙಳ್ ಕುಂಬೋಳ್ ದುವಾಶಿರ್ವಚನಗೈದರು. ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕೂರ್ನಡ್ಕ, ರಾಫಿ ಅಹ್ಸನಿ ಕಾಂತಪುರಂ ಹಾಗೂ ಸ್ಥಳೀಯ ಖತೀಬ್ ಸಲೀಂ ಸಅದಿ ಹೊನ್ನಾವರ ಧಾರ್ಮಿಕ ಉಪನ್ಯಾಸಗೈದರು.
ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು, ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ ಜೈನ್, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಬಂಟ್ವಾಳ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಪೂವಪ್ಪ ಪೂಜಾರಿ, ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ಮಾಜಿ ಶಾಖಾಧ್ಯಕ್ಷ ರಾಮಕೃಷ್ಣ ರೈ, ಮಣಿನಾಲ್ಕೂರು ಗ್ರಾ.ಪಂ. ಸದಸ್ಯರುಗಳಾದ ಶಿವಪ್ಪ ಪೂಜಾರಿ, ಡೆನ್ನಿಸ್ ಮೊರಾಸ್, ಆದಂ ಕುಂಞಿ, ಇಬ್ರಾಹಿಂ ಗಂಡಿ, ಅಶೋಕ್ ಶೆಟ್ಟಿ ಸರಪಾಡಿ, ಮುಹಮ್ಮದ್ ಹಾಜಿ ಬಾಂಬಿಲ ಮೊದಲಾದವರು ಭಾಗವಹಿಸಿದ್ದರು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ.ಬಿ. ಅಬ್ದುಲ್ ಹಮೀದ್, ಪದಾಧಿಕಾರಿಗಳಾದ ಕೆ.ಪಿ. ಖಾದರ್, ಆದಂ ಹಾಜಿ, ಖಾದರ್ ಇಕ್ರಾ, ಪ್ರಮುಖರಾದ ಚೆರಿಯಮೋನು, ಅಬ್ದುಲ್ ಕರೀಂ, ಸುಲೈಮಾನ್ ಜಿ. ಮೊದಲಾದವರು ಉಪಸ್ಥಿತರಿದ್ದರು.