ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧರ್ಮದ ಸಂದೇಶಗಳನ್ನು ಮಕ್ಕಳಿಗೆ ತಲುಪಿಸುವ ಕೆಲಸಗಳು ಹಿರಿಯರಿಂದ ಆಗಬೇಕಾಗಿದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಹೇಳಿದರು.
ಸಜಿಪನಡು ಚಟ್ಟೆಕ್ಕಲ್ ಜಲಾಲಿಯ್ಯ ಮಸೀದಿಯ ೫ನೆ ಜಲಾಲಿಯ್ಯ ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಣ್ಣ, ಧರ್ಮದ ಹೆಸರಿನಲ್ಲಿ ನಡೆಯುವ ಕಚ್ಚಾಟಗಳನ್ನು ಬಿಟ್ಟು ಮನುಷ್ಯರಾದ ನಾವು ಒಬ್ಬೊಬ್ಬರನ್ನು ಅರ್ಥಹಿಸಿ ಪ್ರೀತಿ ಸೌಹಾರ್ದತೆಯಿಂದ ಜೀವನ ನಡೆಸಬೇಕಾಗಿದೆ. ಜಾತಿ, ಧರ್ಮ ಬೇದ ಭಾವ ಬಿಟ್ಟು ಜನರು ಒಟ್ಟಾದಾಗ ಸಮಾಜದಲ್ಲಿ ಮಾನವೀಯ ಮೌಲ್ಯಗಳು ನೆಲೆನಿಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಿ ಮಾತನಾಡಿದರು. ಸೈಯದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಅ ನೆರವೇರಿಸಿದರು. ಸಂತ ತೋಮಾಸ್ ಇಗರ್ಜಿ ಅಮ್ಮೆಂಬಳ ಚೇಳೂರು ಧರ್ಮಗುರು ಫಾದರ್ ವಲೇರಿಯನ್ ಫ್ರೇಂಕ್, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಸಿಐ ಬಿ.ಕೆ.ಮಂಜಯ್ಯ, ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ, ಸಜಿಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್, ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್, ಸಜಿಪ ಮೂಡಾ ಗ್ರಾಪಂ ಅಧ್ಯಕ್ಷ ಎಂ.ಕೆ.ಗಣಪತಿ ಭಟ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯ ಸಂಜೀವ ಪೂಜಾರಿ, ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಇರಾ ಗ್ರಾಪಂ ಸದಸ್ಯ ಕೆ.ಟಿ.ಸುಧಾಕರ, ಪ್ರಕಾಶ್ ಶೆಟ್ಟಿ ಶ್ರೀಶೈಲಾ, ಗೋಳಿಪಡ್ಪು ಜುಮಾ ಮಸೀದಿ ಅಧ್ಯಕ್ಷ ಬಿ.ರಫೀಕ್, ಸದರ್ ಮುಹಮ್ಮದ್ ಶರೀಫ್ ಸಖಾಫಿ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ವಗ್ಗ, ಪಾಣೆಮಂಗಳುರು ಸೆಕ್ಟರ್ ಅಧ್ಯಕ್ಷ ಅಕ್ಬರ್ ಮದನಿ, ಚಟ್ಟೆಕಲ್ ಅಧ್ಯಕ್ಷ ಇಸ್ಮಾಯೀಲ್, ಗರೀಬ್ ನವಾಝ್ ಕಮಿಟಿ ಅಧ್ಯಕ್ಷ ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು. ಸಿರಾಜುದ್ದೀನ್ ಸಖಾಫಿ ಪ್ರಸ್ತಾವಿಸಿ ಸ್ವಾಗತಿಸಿದರು. ಇದೇ ವೇಳೆ ಆಲಡ್ಕದಿಂದ ಚಟ್ಟೆಕ್ಕಲ್ ವರೆಗೆ ಬೈಕ್ ರ್‍ಯಾಲಿ ನಡೆಯಿತು.
ಮಧ್ಯಾಹ್ನ ಚಟ್ಟೆಕ್ಕಲ್ ಜಲಾಲಿಯ್ಯ ಮಸೀದಿಯಲ್ಲಿ ಜುಮಾ ಉದ್ಘಾಟನೆ ನೆರವೇರಿತು. ಸೈಯದ್ ಸೀದಿಕೋಯ ತಂಙಳ್ ನೇತೃತ್ವ ವಹಿಸಿದ್ದರು. ಸೈಯದ್ ಅಬ್ದುಲ್ ಕರೀಂ ತಂಙಳ್, ಸೈಯದ್ ಇಂಬಿಚ್ಚಿಕೋಯ ತಂಙಳ್, ಸೈಯದ್ ಯು.ಎಸ್.ಶಿಹಾಬುದ್ದೀನ್ ತಂಙಳ್, ಸೈಯದ್ ಖಾಸಿಂ ಕೋಯ ತಂಙಳ್, ಸೈಯದ್ ಸಿ.ಟಿ.ಎಂ. ಕುಂಞಿ ಕೋಯ ತಂಙಳ್, ಸೈಯದ್ ಅಮೀರ್ ಅಸ್ಸಖಾಫ್ ತಂಙಳ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.