ದೇವರು ನೀಡಿದ ಸಂಪತ್ತಿನ ಅಲ್ಪಭಾಗವನ್ನಾದರೂ ದಾನ ಮಾಡುವುದರ ಮೂಲಕ ಉಳ್ಳವರೂ ಇಲ್ಲದವರೂ ಸಹಕಾರ ನೀಡಬೇಕು ಎಂದು ಕೇರಳ ಕಣ್ಣೂರಿನ ಪ್ರಸಿದ್ಧ ವಾಗ್ಮಿ ನಿಝಾಮುದ್ದೀನ್ ಬಾಖವಿ ಹೇಳಿದರು.
ಮಾರಿಪಳ್ಳ ಸುಜೀರು ಮಲ್ಲಿ ಹೈದ್ರೋಸಿಯಾ ಜುಮಾ ಮಸೀದಿಯ ಆಶ್ರಯದಲ್ಲಿ ದಫನ ಭೂಮಿ ಖರೀದಿಯ ಸಹಾಯಾರ್ಥವಾಗಿ ಇಲ್ಲಿನ ಶಂಸುಲ್ ಉಲಮಾ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ನಡೆದ ಬೃಹತ್ ಏಕದಿನ ಧಾರ್ಮಿಕ ಮತ ಪ್ರಭಾಷಣದಲ್ಲಿ ಅವರು ಮಾತನಾಡಿದರು.
ಜಮಾಅತ್‌ಗೊಂದು ದಫನ ಭೂಮಿ ಹೊಂದುದು ಇಂದಿನ ಕಾಲದಲ್ಲಿ ದುಬಾರಿಯಾಗಿದೆ ಪ್ರತೀ ಜಮಾಅತ್‌ನಲ್ಲೊಂದು ದಫನ ಭೂಮಿಯ ಅಗತ್ಯತೆ ಇದೆ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಸಮಸ್ತ ಕೇರಳ ಮುಶಾವರದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು. ಸುಜೀರ್ ಮಲ್ಲಿ ಹೈದ್ರೋಶಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಮೌಲಾನ ಅಬ್ದುಲ್ ರಝಾಕ್ ಹಾಜಿ ಮಲೇಶ್ಯಾ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷ, ಸಮಾಜ ಸೇವಕ ಖಾಸಿಂ ಅಹ್ಮದ್, ಟಿ.ಕೆ. ಎಂಟರ್‌ಪ್ರೈಸಸ್ ಮಾಲಕ ಟಿ.ಕೆ.ಬಶೀರ್, ಅಬ್ದುಲ್ ರಝಾಕ್ ಹಾಜಿ ಮಲೇಶ್ಯಾ, ಕಾರ್ಯಕ್ರಮದ ಸ್ಥಳ ದಾನಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಸ್ತ ಕಾಸರಗೋಡು ಜೊತೆ ಕಾರ್ಯದರ್ಶಿ ಚೆಂಗಳಂ ಅಬ್ದುಲ್ ಫೈಝಿ, ಮಾರಿಪಳ್ಳ ಬದ್ರಿಯ್ಯೀನ್ ಜುಮಾ ಮಸೀದಿ ಅಧ್ಯಕ್ಷ ಸಿ.ಮಹ್‌ಮೂದ್ ಹಾಜಿ, ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಫರಂಗಿಪೇಟೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಖತೀಬ್ ಉಸ್ಮಾನ್ ದಾರಿಮಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ಮುಹಮ್ಮದ್ ಹೈಮಾನ್ ಕಿರಾಅತ್ ಪಠಿಸಿದರು. ದಾರಿಮೀಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಾಹಿನ್ ದಾರಿಮಿ ಪಾತೂರು ಸ್ವಾಗತಿಸಿದರು.